ವಿಟ್ಲ: ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

Update: 2019-09-15 04:24 GMT

ವಿಟ್ಲ: ವಿಟ್ಲ ಕಾರುಣ್ಯ ಚಾರಿಟೇಬಲ್ ಟ್ರಸ್ಟ್,  ಮೇಗಿನಪೇಟೆ ವಿಟ್ಲ ಇದರ ಉದ್ಘಾಟನಾ ಸಮಾರಂಭವು ವಿಟ್ಲ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ನಡೆಯಿತು.

ಟ್ರಸ್ಟಿನ ಅಧ್ಯಕ್ಷ ವಿ.ಎಚ್. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮೊಹಮ್ಮದ್ ಅಲಿ ಪೈಝಿ, ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಮಾಅತಿನ ಅಧ್ಯಕ್ಷ ಇಬ್ರಾಹಿಂ ಏರ್ ಸೌoಡ್, ಮಾಜಿ ಅಧ್ಯಕ್ಷ ಅಂದುಞಿ ಗಮಿ, ಭಾಗವಹಿಸಿದರು.

ಟ್ರಸ್ಟಿನ  ಕಾರ್ಯದರ್ಶಿ ಅಬೂಬಕರ್ ನೋಟರಿ ಪ್ರಸ್ತಾವನೆಗೈದರು. ಟ್ರಸ್ಟಿನ ಸದಸ್ಯರಾದ ಅಶ್ರಫ್ ಮೊಹಮ್ಮದ್ ಪೊನ್ನೋಟು, ಅಬ್ದುಲ್ ಅಝೀಝ್ ಹಳೆಮನೆ,   ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮುಸ್ತಫಾ ಖಲೀಲ್  ಮೇಗಿನಪೇಟೆ, ಬಿ.ಎಂ. ಅಬ್ದುಲ್ ಖಾದರ್ ಮದೀನಾ  ಬೊಬ್ಬೆಕ್ಕೇರಿ, ಮೊಹಮ್ಮದ್ ಇಕ್ಬಾಲ್ ಶೀತಲ್, ಯೂಸುಫ್ ಗಮಿ, ಮಹಮ್ಮದ್ ಶಾಫಿ ಗಮಿ, ವಿಟ್ಲ ಜುಮಾ ಮಸೀದಿಯ ಹಕೀಮ್ ಅರ್ಶದಿ, ಮೊಹಮ್ಮದ್ ಹಾಜಿ ಎ.ಎಸ್. ಮಾರ್ಟ್, ಹೊರೈಜಾನ್ ಪಬ್ಲಿಕ್ ಸ್ಕೂಲಿನ ಅಬೂಬಕ್ಕರ್ ಸಿದ್ದಿಕ್ ಮಾಲಮೂಲೆ, ಉದ್ಯಮಿ ರಮ್ಲಾ ಹಾಜಿ ಮುಂತಾದವರು ಉಪಸ್ಥಿತ ರಿದ್ದರು.

ಉದ್ಘಾಟನಾ ಸಮಾರಂಭದ ಬಳಿಕ ಮಹಿಳೆಯರಿಗಾಗಿ ಮಯ್ಯತ್ ಪರಿಪಾಲನೆ ಬಗ್ಗೆ ಡೆಮೋ ಕ್ಲಾಸ್ ನಡೆಸಲಾಯಿತು. ಪರ್ಲಡ್ಕ ಸಂಶುಲ್ ಉಲಮಾ ಶರೀಅತ್ ಕಾಲೇಜಿನ ಅಫಿಫಾ ಮತ್ತು ಶಹನಾಝ್ ತರಬೇತು ನೀಡಿದರು. ಮೇಗಿನಪೇಟೆ ಅಲ್ ಖೈರ್ ಶರೀಅತ್ ಕಾಲೇಜಿನ ವಿದ್ಯಾರ್ಥಿಗಳಾದ ಝಾಕಿಯ ಮತ್ತು ಮುನೀರ ಕಾರ್ಯಕ್ರಮ ನಿರೂಪಿಸಿದರು. ಪರಿಸರದ ಸುಮಾರು 150 ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News