ಈಡಿ ವಶದಲ್ಲಿರುವ ಡಿಕೆಶಿ ಮೂರನೇ ಬಾರಿ ಆಸ್ಪತ್ರೆಗೆ ದಾಖಲು

Update: 2019-09-15 04:32 GMT

ಹೊಸದಿಲ್ಲಿ, ಸೆ.15: ಎದೆನೋವು ಸಮಸ್ಯೆಯಿಂದಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ಹೊಸದಿಲ್ಲಿಯ ರಾಮ್ ಮನೋಹರ್ ಲೋಹಿಯಾ(ಆರ್ ಎಂ ಎಲ್)  ಆಸ್ಪತ್ರೆಗೆ ದಾಖಲಿಸಲಾಗಿದೆ. 

ಜಾರಿ ನಿರ್ದೇಶನಾಲಯ (ಈಡಿ) ವಶಕ್ಕೆ ತೆಗೆದುಕೊಂಡ ನಂತರ ಶಿವಕುಮಾರ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವುದು ಇದು ಮೂರನೇ ಬಾರಿ. 'ಡಿ.ಕೆ.ಶಿವಕುಮಾರ್ ಅವರು ರಕ್ತದೊತ್ತಡದ ಸಮಸ್ಯೆಯೊಂದಿಗೆ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯವು ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ಸೆಪ್ಟೆಂಬರ್ 17 ರವರೆಗೆ ವಿಸ್ತರಿಸಿದೆ. ಈಡಿ ಅಧಿಕಾರಿಗಳು ಇನ್ನೂ ಐದು ದಿನಗಳ ಕಸ್ಟಡಿ ಕೋರಿದ ನಂತರ ಶಿವಕುಮಾರ್ ಅವರ ಕಸ್ಟಡಿ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್   ವಿಸ್ತರಿಸಿದರು.

ಮೊದಲು ಶಿವಕುಮಾರ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಆರೋಗ್ಯ ಸರಿ ಇದ್ದಾಗ ಮಾತ್ರ ಅವರಿಗೆ ಪ್ರಶ್ನೆಗಳನ್ನು ಕೇಳಬೇಕು ಎಂದು ನ್ಯಾಯಾಧೀಶರು ಈಡಿ ಅಧಿಕಾರಿಗಳಿ ಗೆ ಸೂಚಿಸಿದರು. ಸೆಪ್ಟೆಂಬರ್ 3 ರಂದು ಈಡಿಯಿಂದ ಬಂಧಿಸಲ್ಪಟ್ಟ ಶಿವಕುಮಾರ್ ಅವರನ್ನು ಒಂಬತ್ತು ದಿನಗಳ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರು ಸೆಪ್ಟೆಂಬರ್ 4 ರಿಂದ ಈಡಿ ವಶದಲ್ಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News