ಪ್ರತಿಭಾ ಕಾರಂಜಿ: ಹೊರೈಝನ್ ಶಾಲೆಗೆ ಹಲವು ಪ್ರಶಸ್ತಿಗಳು

Update: 2019-09-15 05:34 GMT

 ವಿಟ್ಲ:  ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾಥಮಿಕ ಮಟ್ಟದ ಹಿರಿಯರ ವಿಭಾಗದ ಪ್ರತಿಭಾ ಕಾರಂಜಿ ಯಲ್ಲಿ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿನ ವಿದ್ಯಾರ್ಥಿಗಳಾದ ಅವ್ವ ಶಫಾ, ತಾಬೀಶ್, ಖದೀಜತ್ ಮಿನ್ನಾ, ಅವ್ವ ಅನನ್, ತೌಫೀಕ, ಫಿಝಾ ಕೆ ಅವರು ಕವ್ವಾಲಿಯಲ್ಲಿ ಪ್ರಥಮ ಸ್ಥಾನ , ಅಭಿನಯ ಗೀತೆಯಲ್ಲಿ ಫಿಝಾ ಕೆ ಪ್ರಥಮ, ಸಂಸ್ಕೃತ ಕಂಠಪಾಠ ದಲ್ಲಿ ತೌಫೀಕ, ಉರ್ದು ಕಂಠಪಾಠ ದಲ್ಲಿ ಫಾತಿಮತ್ ಶಿಫಾ, ಇಂಗ್ಲಿಷ್ ಕಂಠಪಾಠ ದಲ್ಲಿ ಅವ್ವಶಫಾ, ಜಾನಪದ ನೃತ್ಯ ದಲ್ಲಿ ಶಿಫಾನ, ಫಾತಿಮಾ ಅಜ್ವಿದಾ, ಸಫಿಯ ಅನ್ಸಿದಾ, ಇಝಾ, ಆಯಿಶತುಲ್ ಫೈಮಾ, ಫಾತಿಮತ್ ನಿಷಾನ ದ್ವಿತೀಯ ಸ್ಥಾನ ವನ್ನು, ಭಕ್ತಿ ಗೀತೆಯಲ್ಲಿ ಮಹಮ್ಮದ್ ತೌಬೀಶ್, ಹಿಂದಿ ಕಂಠಪಾಠ ದಲ್ಲಿ ಖದೀಜತ್ ಮಿನ್ಹಾ,ಕುರಾನ್ ಪಠಣದಲ್ಲಿ ಮರಿಯಂ ಶಿಫಾ ತೃತೀಯ ಸ್ಥಾನ ವನ್ನು  ಗಳಿಸಿದ್ದಾರೆ.

ಕಿರಿಯರ ವಿಭಾಗದಲ್ಲಿ  ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕಿರಿಯರ ವಿಭಾಗ ದಲ್ಲಿ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಖದೀಜತ್ ನೀಹಾ, ಫಾತಿಮತ್ ಶಹ್‌ಮಾ, ಫಾತಿಮತ್ ಝಕಿಯಾ, ಶೈಮಾ ಖದಿಜಾ, ತಸ್ನೀಮಾ, ಖದೀಜತ್ ರೈಹಾನತ್ ಅನಿಲಕಟ್ಟೆ , ಅರಬಿಕ್ ಪಠಣದಲಿ ವಿ.ಎ.ಝಿನ್ನೀರ ಪ್ರಥಮ ಸ್ಥಾನ, ಮರಾಠಿ ಕಂಠಪಾಠ ದಲ್ಲಿ ಅಬ್ದುಲ್ ಶಹೀದ್,ತುಳು ಕಂಠಪಾಠ ದಲ್ಲಿ ಮಹಮ್ಮದ್ ಫಾಝಿಲ್, ಹಿಂದಿ ಕಂಠಪಾಠ ದಲ್ಲಿ ಅಯಿಷಾ ತಶ್ನೀಮಾ, ಅಭಿನಯ ಗೀತೆಯಲ್ಲಿ ಹಿಝಾ ಫಾತಿಮಾ, ಜಾನಪದ ನೃತ್ಯ ದಲ್ಲಿ ಆಯಿಷತ್ ರಿದಾ, ಐಷಾ ಫಾತಿಮಾ, ಫಾತಿಮಾ ತನ್ಹಾ, ಆಯಿಷಾ ತಸ್ನೀಮಾ, ಹಫೀಝಾ ಬಿ.ಕೆ.ತಸ್ಮಿಯಾ, ಕವ್ವಾಲಿಯಲ್ಲಿ ನಾಝಿಯ ಬಾನು, ಇಬ್ರಾಹಿಂ ಅನಫ್, ಮನಾಲ್ ಶೇಖ್, ಮಹಮ್ಮದ್ ಅನಸ್, ಫಾತಿಮತ್ ತ್ವೈಬಾ  ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ಕ್ಲೇ ಮಾಡಲಿಂಗ್ ನಲ್ಲಿ ಮಹಮ್ಮದ್ ಮುಹಾಝ್, ಲಘು ಸಂಗೀತ ಮತ್ತು ಕನ್ನಡ ಕಂಠಪಾಠ ದಲ್ಲಿ ಖದಿಜಾ ರೈಹಾನತ್ ಅನಿಲಕಟ್ಟೆ, ತೆಲುಗು ಕಂಠಪಾಠ ದಲ್ಲಿ ಅಮೀನತ್ ರಷಾ, ಇಂಗ್ಲಿಷ್ ಕಂಠಪಾಠ ದಲ್ಲಿ ಹಿಝಾ ಫಾತಿಮಾ, ರಸಪ್ರಶ್ನೆಯಲ್ಲಿ ಮಹಮ್ಮದ್ ಫಾಝಿಲ್, ಫಾತಿಮತ್ ಶಾಯಿಫಾ, ಮಹಮ್ಮದ್ ಮುಹಾಝ್, ಮಹಮ್ಮದ್ ಇಷಾನ್ ತೃತೀಯ ಸ್ಥಾನ ವನ್ನು ಪಡೆದಿದ್ದಾರೆ.

ಪುಣಚ ಶ್ರೀ ದೇವಿ ಪ್ರೌಢಶಾಲೆಯಲ್ಲಿ ನಡೆದ ಪ್ರೌಢ ಶಾಲಾ ಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ಮಲ್ಲಿಕಾ ಇರಂ ಪ್ರಥಮ, ಜಾನಪದ ಗೀತೆ ಯಲ್ಲಿ ಹಾಜಿರ ತಫ್ಶಿರಾ ತೃತೀಯ, ಸಂಸ್ಕೃತ ಭಾಷಣದಲ್ಲಿ ಅಶ್ರಿಫಾ ತೃತೀಯ ಸ್ಥಾನ ವನ್ನು ಪಡೆದಿರುತ್ತಾರೆ ‌

 ಮುಖ್ಯ ಶಿಕ್ಷಕಿ ವಿಲಾಸಿನಿ ಮತ್ತು ಶಿಕ್ಷಕ ವೃಂದದವರು ತರಬೇತಿ ನೀಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News