×
Ad

ದಲಿತರ ಪರ ನಿಂತು ರವಿದಾಸ ಮಂದಿರಕ್ಕಾಗಿ ಬೃಹತ್ ಜಾಥಾ ನಡೆಸಿದ ಮುಸ್ಲಿಮರು

Update: 2019-09-15 21:56 IST

ಹೊಸದಿಲ್ಲಿ,ಸೆ.15: ರವಿದಾಸ ಮಂದಿರ ಧ್ವಂಸ ಪ್ರಕರಣದಲ್ಲಿ ದಲಿತರ ಪರ ನಿಂತಿರುವ ಮುಸ್ಲಿಮರು ದಲಿತರಿಗೆ ಬೆಂಬಲ ಸೂಚಿಸಿ ರವಿವಾರದಂದು ಹೊಸದಿಲ್ಲಿಯಲ್ಲಿ ಬೃಹತ್ ಜಾಥಾ ನಡೆಸಿದರು.

ಹೊಸದಿಲ್ಲಿಯ ಜಾಮಿಯಾ ಹಮ್ದರ್ದ್‌ನಿಂದ ಆರಂಭವಾದ ಮೆರವಣಿಗೆ ತುಘಲಕಾಬಾದ್‌ನಲ್ಲಿರುವ ಧ್ವಂಸಗೊಂಡ ರವಿದಾಸ ಮಂದಿರದ ಸಮೀಪ ಕೊನೆಗೊಂಡಿತು. ಲಕ್ನೋದ ತೀಲೆ ವಾಲಿ ಮಸ್ಜಿದ್‌ನ ಮೌಲಾನ ಫಝ್ಲುಲ್ ಮನನ್ ಸೇರಿದಂತೆ ಅನೇಕ ಪ್ರತಿಷ್ಟಿತ ಧಾರ್ಮಿಕ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಮತ್ತು ಖ್ಯಾತ ನ್ಯಾಯವಾದಿ ಮುಹಮ್ಮದ್ ಪ್ರಚ ಅವರು, ದಲಿತರು ಮತ್ತು ಮುಸ್ಲಿಮರು ಅಪಾಯಕ್ಕೊಳಗಾಗಿದ್ದಾರೆ ಮತ್ತು ಅದರ ವಿರುದ್ಧ ಜೊತೆಯಾಗಿ ಹೋರಾಡಬೇಕಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾವು ಒಂದಾಗಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಬಂಧಿಸಲ್ಪಟ್ಟಿರುವ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಹಾಗೂ ಇತರ 95 ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕೆಂಬ ಆಗ್ರಹವನ್ನೂ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News