ರಾಷ್ಟ್ರಭಾಷೆಯಾಗಿ ಹಿಂದಿ ಹೇರಿಕೆ ಆರೆಸ್ಸೆಸ್‌ ಅಜೆಂಡಾ: ಸೀತಾರಾಮ್ ಯೆಚೂರಿ

Update: 2019-09-15 17:27 GMT

ಹೊಸದಿಲ್ಲಿ,ಸೆ.15: ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಹೇರುವುದು ಆರೆಸ್ಸೆಸ್‌ನ ಅಜೆಂಡಾ ಆಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ರವಿವಾರ ಇಲ್ಲಿ ಆರೋಪಿಸಿದರು.

 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು,ಒಂದು ರಾಷ್ಟ್ರ,ಒಂದು ಭಾಷೆ ಮತ್ತು ಒಂದು ಸಂಸ್ಕೃತಿ ಇದು ಆರೆಸ್ಸೆಸ್‌ನ ಸಿದ್ಧಾಂತವಾಗಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲ ಭಾಷೆಗಳು ನಮ್ಮ ರಾಷ್ಟ್ರಭಾಷೆಗಳಾಗಿವೆ. ಹಿಂದಿ ಸಂಪರ್ಕ ಭಾಷೆಯಾಗಬಹುದು,ಆದರೆ ಅದನ್ನು ರಾಷ್ಟ್ರಭಾಷೆಯನ್ನಾಗಿ ಹೇರುವ ಯಾವುದೇ ಪ್ರಯತ್ನವು ನಕಾರಾತ್ಮಕ ಪರಿಣಾಮವನ್ನುಂಟು ಮಾಡಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News