ಸ್ಟಾರ್ ಆಟಗಾರನಾಗಿ ಮಿಂಚಿದ ಅಥರ್ವ

Update: 2019-09-15 18:19 GMT

ಮುಂಬೈ, ಸೆ. 15: ಅಂಡರ್-19 ಏಶ್ಯಕಪ್‌ನ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡದವಿರುದ್ಧ ಮುಂಬೈನ ಅಥರ್ವ ಅಂಕೋ ಲೆಕರ್ 28ಕ್ಕೆ 5 ವಿಕೆಟ್ ಉಡಾಯಿಸುವ ಮೂಲಕ ಭಾರತಕ್ಕೆ 5 ರನ್‌ಗಳ ರೋಚಕ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

  ಶನಿವಾರ ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ 106 ರನ್‌ಗಳಿಗೆ ಆಲೌಟಾಗಿತ್ತು. ಗೆಲುವಿಗೆ 107 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ ತಂಡ ಅಥರ್ವ ಸ್ಪಿನ್ ದಾಳಿಗೆ ಸಿಲುಕಿ 33 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾಗಿತ್ತು. ಗೆಲುವಿನ ರೂವಾರಿ 18ರ ಹರೆಯದ ಅಥರ್ವಕಠಿಣ ಪರಿಶ್ರಮದ ಮೂಲಕ ಈ ಹಂತಕ್ಕೆ ಬೆಳೆದಿದ್ದಾರೆ.ಸ್ಥಳೀಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ಅಥರ್ವಅವರು ಚಿಕ್ಕಂದಿನಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ತನ್ನ ತಂದೆಯ ಪ್ರೋತ್ಸಾಹ ಕಾರಣ ಎನ್ನುತ್ತಾರೆ.

ಅಥರ್ವ 10ನೇ ಹರೆಯಕ್ಕೆ ಕಾಲಿಟ್ಟಾಗ ತಂದೆಯನ್ನು ಕಳೆದುಕೊಂಡರು. ಅಥರ್ವತಂದೆ ಬಸ್ ಕಂಡಕ್ಟರ್ ಆಗಿದ್ದರು. ಅವರು ನಿಧನರಾದಾಗ ಪತ್ನಿಗೆ ಕೆಲಸ ಸಿಕ್ಕಿತು. ಮಹಿಳಾ ಕಂಡಕ್ಟರ್ ಆಗಿರುವ ತಾಯಿ ಅಥರ್ವಗೆ ಕ್ರಿಕೆಟ್‌ನಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದರು.

 ಅಥರ್ವ ಉತ್ತಮ ಕ್ರಿಕೆಟಿಗನಾಗಿ ರೂಪುಗೊಳ್ಳುವುದು ತಂದೆಯ ಕನಸಾಗಿತ್ತು. ತಾಯಿ ನೀಡಿದ ಪ್ರೋತ್ಸಾಹದಿಂದ ಅಥರ್ವಗೆ ಕ್ರಿಕೆಟ್‌ನಲ್ಲಿ ಬೆಳೆಯಲು ಸಾಧ್ಯವಾಯಿತು. ಅಥರ್ವ ಅಂಡರ್-19 ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಬಾಂಗ್ಲಾ ವಿರುದ್ಧ ಫೈನಲ್‌ನಲ್ಲಿ ಮಿಂಚಿದ್ದ ಅವರು ಗ್ರೂಪ್ ಹಂತದಲ್ಲೂ ಚೆನ್ನಾಗಿ ಆಡಿದ್ದರು. ಪಾಕಿಸ್ತಾನ ವಿರುದ್ಧ 36ಕ್ಕೆ 3 ಮತ್ತು ಅಫ್ಘಾನಿಸ್ತಾನ ವಿರುದ್ಧ 16ಕ್ಕೆ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಶನಿವಾರ ಬಾಂಗ್ಲಾ ವಿರುದ್ಧ ಅಥರ್ವ ಅವರಿಗೆ ವೇಗಿ ಆಕಾಶ್ ಸಿಂಗ್ ಉತ್ತಮ ಬೆಂಬಲ ನೀಡಿದ್ದರು. ಅವರು 3 ವಿಕೆಟ್ ಜಮೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News