ಖಾಸಗಿ ಸಹಭಾಗಿತ್ವದೊಂದಿಗೆ ಮೆರಿ ಟೈಮ್ ಬೋರ್ಡ್ ರಚಿಸಲಾಗುವುದು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Update: 2019-09-16 12:46 GMT

ಮಂಗಳೂರು, ಸೆ.16: ರಾಜ್ಯದಲ್ಲಿ ಬಂದರುಗಳ ಅಭಿವೃದ್ಧಿಗೆ ಮೆರಿ ಟೈಮ್ ಬೋರ್ಡ್ ನ್ನು ಖಾಸಗಿ ಸಹಭಾಗಿತ್ವದೊಂದಿಗೆ ರಚಿಸಲಾಗುವುದು  ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯ ಕರಾವಳಿಯ ಎಲ್ಲಾ ಬಂದರುಗಳ ಅಭಿವೃದ್ಧಿಗೆ ಇದರಿಂದ ಅನುಕೂಲವಾಗಲಿದೆ. ಈ ಬಗ್ಗೆ ರಾಜ್ಯದಿಂದ ಅಧ್ಯಯನ ತಂಡ ಗುಜರಾತ್, ಕೇರಳ, ತಮಿಳುನಾಡು ಬಂದರು ಗಳ ಅಧ್ಯಯನಕ್ಕೆ ತೆರಳಿದೆ. ಮುಂದಿನ ಎರಡು ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.

ಹಳೆ ವಾಣಿಜ್ಯ ಬಂದರನ್ನು ಇನ್ನಷ್ಟು ಆಳವಾಗಿ ಡ್ರಜ್ಜಿಂಗ್ ಮಾಡಿ ಅಲ್ಲಿ ದೊಡ್ಡ ಗಾತ್ರದ ಹಡಗು ನಿಲುಗಡೆಗೆ ಅವಕಾಶ ಮಾಡಿಕೊಡುವ ಕಾಮಗಾರಿ ತ್ವರಿತ ಗೊಳಿಸಬೇಕು.ಈಗಾಗಲೇ ರಾಜ್ಯ ಸರಕಾರ ದಿಂದ 14.50  ಕೋಟಿ ರೂ ಹಾಗೂ ಕೇಂದ್ರ ಸರಕಾರದಿಂದ 14.59ಕೋಟಿ ರೂ ರಾಜ್ಯ ಸರಕಾರದಿಂದ ಒಟ್ಟು 29 ಕೋಟಿ ರೂ ಕಾಮಗಾರಿ ಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಂಗಳೂರು ಮೀನುಗಾರಿಕಾ ಬಂದರಿನ ಮೂರನೆ ಹಂತದ ಕಾಮಗಾರಿ ಪೂರ್ಣ ಗೊಳ್ಳಲು 11.30ಕೋಟಿ ರೂಅನುದಾನ ಮಂಜೂರಾತಿ ಆಗಬೇಕು. ತುರ್ತಾಗಿ ರಸ್ತೆ, ಸೇತುವೆ ನಿರ್ಮಾಣ ಆಗಬೇಕು ಎಂದು ಧಕ್ಕೆ ಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದ್ದಾರೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನದಿ ಅಭಿಮುಖ ಪ್ರದೇಶದ ಅಭಿವೃದ್ಧಿ ಯ ಪ್ರಸ್ತಾಪವಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಸಭೆಗೆ ಮಾಹಿತಿ ನೀಡಿದ್ದಾರೆ.

ಶಾಲೆಗಳಲ್ಲಿ ಅಕ್ವೇರಿಯಂ ಸ್ಥಾಪಿಸಲು ಮೀನುಗಾರಿಕಾ ಇಲಾಖೆ ಯಿಂದ ಸಹಾಯ ಧನ ನೀಡಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ತಿಪ್ಪೇಸ್ವಾಮಿ ಸಭೆಗೆ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧು ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ , ಪುತ್ತೂರು ಶಾಸಕ ಸಂಜೀವ ಮಟಂದೂರು, ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮೊದಲಾದ ವರು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News