ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಅಪಾರ: ಪ್ರೊ.ಎಂ.ಎಸ್‌ಶೆಟ್ಟಿ

Update: 2019-09-16 14:10 GMT

ಉಡುಪಿ, ಸೆ.16: ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಬಹಳ ಮಹತ್ವವಾಗಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ ಎಂದು ಕಾಂಕ್ರೀಟ್ ತಂತ್ರಜ್ಞ ಪ್ರೊ.ಎಂ.ಎಸ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌ ಆ್ಯಂಡ್ ಅರ್ಕಿಟೆಕ್ಟ್ ಅಸೋಸಿಯೇಶನ್ ವತಿಯಿಂದ ರವಿವಾರ ಉಡುಪಿಯ ಓಶಿಯನ್ ಪರ್ಲ್ ಹೊಟೆಲ್ ಸಭಾಂಗಣದಲ್ಲಿ ಆಯೋಜಿಸಲಾದ ಇಂಜಿನಿಯರ್ಸ್‌ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಕೇಂದ್ರ ಸರಕಾರ ದೇಶದ ವಾರ್ಷಿಕ ಬಜೆಟ್‌ನಲ್ಲಿ ಶೇ.20ರಷ್ಟು ನಿರ್ಮಾಣ ಕ್ಷೇತ್ರಕ್ಕಾಗಿ ವ್ಯಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ದೇಶ ಕಟ್ಟುವಲ್ಲಿ ಇಂಜಿನಿ ಯರ್‌ಗಳ ಜವಾಬ್ದಾರಿ ಹೆಚ್ಚಿದೆ. ನಿರ್ಮಾಣ ಕ್ಷೇತ್ರಕ್ಕೆ ಮರಳಿನ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಇದರಿಂದ ನಿರ್ಮಾಣ ಕ್ಷೇತ್ರ, ಬಿಲ್ಡರ್‌ಗಳು, ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ಮರಳಿನ ಸಮಸ್ಯೆ ಮಾನವ ನಿರ್ಮಿತ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ದಿನೇಶ್ ಭಟ್, ದೇವಿ ಗ್ಲಾಸ್ ಹೌಸ್ ಮಾಲಕ ಸುರೇಶ್ ನಾಯ್ಕಾ, ಕಾಂಕ್ರೀಟ್ ತಂತ್ರಜ್ಞ ಪ್ರೊ.ಎಂ.ಎಸ್ ಶೆಟ್ಟಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೇಹ ಭಟ್ ಅವರನ್ನು ಸನ್ಮಾನಿಸ ಲಾಯಿತು.

ಕೆಪಿಸಿಎಲ್‌ನ ನಿವೃತ್ತ ಮುಖ್ಯ ಇಂಜಿನಿಯರ್ ಆನಂದ್ ಜಿ.ಕುಲಕರ್ಣಿ, ಅಸೋಸಿಯೇಶನ್ ಅಧ್ಯಕ್ಷ ಎಂ.ಗೋಪಾಲ ಭಟ್, ಗೌರವಧ್ಯಕ್ಷ ಫ್ರೊ.ನಾಗೇಶ್ ಹೆಗ್ಡೆ, ಉಪಾಧ್ಯಕ್ಷ ಎಂ.ಗಂಗಾಧರ್ ರಾವ್, ಕಾರ್ಯದರ್ಶಿ ಅಮಿತ್ ಅರವಿಂದ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಯೋಗೀಶ್ ಚಂದ್ರಾದರ್ ಹಾಗೂ ಪಾಂಡುರಂಗ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News