ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿಗೆ ರಾಜಸ್ಥಾನ ಸರಕಾರದ ಚಿಂತನೆ

Update: 2019-09-16 14:30 GMT

ಜೈಪುರ,ಸೆ.16: ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿಯನ್ನು ಒದಗಿಸುವ ಸಾಧ್ಯತೆಯ ಬಗ್ಗೆ ರಾಜಸ್ಥಾನ ಸರಕಾರವು ಚಿಂತನೆ ನಡೆಸುತ್ತಿದೆ.

ಪ್ರಸ್ತಾವವು ಇನ್ನೂ ಆರಂಭಿಕ ಹಂತದಲ್ಲಿದೆ. ಶೀಘ್ರವೇ ವಿವಿಧ ಸರಕಾರಿ ಇಲಾಖೆಗಳು ಈ ಪ್ರಸ್ತಾವದ ಕುರಿತು ಚಿಂತನ ಮಂಥನ ನಡೆಸಲಿವೆ ಎಂದು ರಾಜಸ್ಥಾನ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ಡಾ.ಸಮಿತ್ ಶರ್ಮಾ ತಿಳಿಸಿದರು.

ಆಂಧ್ರ ಪ್ರದೇಶ ವಿಧಾನಸಭೆಯು ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸುವ ಮಸೂದೆಯನ್ನು ಈಗಾಗಲೇ ಅಂಗೀಕರಿಸಿದೆ ಎಂದರು.

ಖಾಸಗಿ ಕೇತ್ರದಲ್ಲಿ ಸ್ಥಳೀಯ ಯುವಜನರಿಗೆ ಶೇ.70 ಮೀಸಲಾತಿಯನ್ನು ಒದಗಿಸಲು ಕಾನೂನೊಂದನ್ನು ತರಲು ತನ್ನ ಸರಕಾರವು ಚಿಂತನೆ ನಡೆಸುತ್ತಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ ಅವರೂ ಇತ್ತೀಚಿಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News