ಆಗಸ್ಟಾ ವೆಸ್ಟ್‌ಲ್ಯಾಂಡ್:ರತುಲ್ ಪುರಿಯ ಈ.ಡಿ.ಕಸ್ಟಡಿ ಮೂರು ದಿನ ವಿಸ್ತರಣೆ

Update: 2019-09-16 14:31 GMT

ಹೊಸದಿಲ್ಲಿ,ಸೆ.16: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ ಅವರ ಸೋದರಳಿಯ ರತುಲ್ ಪುರಿಯ ಈ.ಡಿ.ಕಸ್ಟಡಿಯನ್ನು ಇಲ್ಲಿಯ ವಿಶೇಷ ನ್ಯಾಯಾಲಯವು ಸೋಮವಾರ ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಿ ಆದೇಶಿಸಿದೆ.

ಜಾರಿ ನಿರ್ದೇಶನಾಲಯವು ಪುರಿಯನ್ನು ಸೆ.4ರಂದು ಬಂಧಿಸಿದ್ದು,ಈ.ಡಿ.ಕಸ್ಟಡಿಯ ಅವಧಿ ಸೋಮವಾರ ಅಂತ್ಯಗೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News