ಸೌದಿ ಮೇಲೆ ಇನ್ನೂ ದಾಳಿ: ಹೌಥಿ ಸೇನಾ ವಕ್ತಾರ ಎಚ್ಚರಿಕೆ

Update: 2019-09-16 16:03 GMT

ದುಬೈ, ಸೆ. 16: ಸೌದಿ ಅರೇಬಿಯದ ಅರಾಮ್ಕೊ ತೈಲ ಸಂಸ್ಕರಣಾ ಸ್ಥಾವರಗಳು ಈಗಲೂ ನಮ್ಮ ಗುರಿಯಾಗಿವೆ ಹಾಗೂ ಯಾವುದೇ ಕ್ಷಣದಲ್ಲಿ ಅದರ ಮೇಲೆ ದಾಳಿ ನಡೆಯಬಹುದು ಎಂದು ಯೆಮನ್‌ ನ ಹೌಥಿ ಬಂಡುಕೋರರು ಸೋಮವಾರ ಹೇಳಿದ್ದಾರೆ ಹಾಗೂ ಅಲ್ಲಿಂದ ಹೊರಹೋಗುವಂತೆ ವಿದೇಶಿಯರಿಗೆ ಎಚ್ಚರಿಕೆ ನೀಡಿದ್ದಾರೆ.

 ಸೌದಿ ಅರೇಬಿಯದ ಪೂರ್ವದ ಪ್ರಾಂತದಲ್ಲಿರುವ ಅಬ್ಬಾಯಿಕ್ ಮತ್ತು ಖುರೈಸ್‌ನಲ್ಲಿರುವ ಅರಾಮ್ಕೊ ಸ್ಥಾವರಗಳ ಮೇಲೆ ಸಾಮಾನ್ಯ ಮತ್ತು ಜೆಟ್ ಇಂಜಿನ್‌ಗಳನ್ನು ಒಳಗೊಂಡ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಯಿತು ಎಂದು ಹೌಥಿ ಸೇನಾ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಯೆಮನ್ ಮೇಲಿನ ತನ್ನ ಆಕ್ರಮಣ ಮತ್ತು ದಿಗ್ಬಂಧನವನ್ನು ಸೌದಿ ಅರೇಬಿಯ ಕೊನೆಗೊಳಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News