ತಂದೆ‌ ಜಾರಿಗೆ ತಂದಿದ್ದ‌ ಕಾನೂನಿನಡಿ ಫಾರೂಕ್ ಅಬ್ದುಲ್ಲಾ ಬಂಧನ !

Update: 2019-09-16 17:20 GMT

ಶ್ರೀನಗರ,ಸೆ.16: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯಡಿ ಬಂಧಿಸುವಂತೆ ಕೇಂದ್ರ ಸರಕಾರ ಸೋಮವಾರ ಸೂಚಿಸಿದೆ. ಬಂಧಿತರನ್ನು ಎರಡು ವರ್ಷಗಳ ವರೆಗೆ ಯಾವುದೇ ವಿಚಾರಣೆಯಿಲ್ಲದೆ ಬಂಧನದಲ್ಲಿರಿಸಲು ಅವಕಾಶ ನೀಡುವ ಈ ಕಠಿಣ ಕಾನೂನನ್ನು ಜಾರಿಗೆ ತಂದವರು ಫಾರೂಕ್ ಅಬ್ದುಲ್ಲ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಶೇಕ್ ಅಬ್ದುಲ್ಲಾ ಅವರು.

ಶೇಕ್ ಅಬ್ದುಲ್ಲಾ ಅವರು ಮರ ಕಳ್ಳಸಾಗಾಟಗಾರರ ಹಾವಳಿಯನ್ನು ತಡೆಯುವ ಉದ್ದೇಶದಿಂದ 1970ರಲ್ಲಿ ಜಾರಿಗೆ ತಂದ ಪಿಎಸ್‌ಎಯನ್ನು ಕಾಲಕ್ರಮೇಣ ಉಗ್ರರು, ಪ್ರತ್ಯೇಕವಾದಿಗಳು ಮತ್ತು ಕಲ್ಲೆಸೆತಗಾರರ ವಿರುದ್ಧವೂ ಬಳಸಲಾಯಿತು. 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹನ್ ವಾನಿ ಹತ್ಯೆ ನಡೆದ ಸಂದರ್ಭ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ 550ಕ್ಕೂ ಅಧಿಕ ಜನರನ್ನು ಪಿಎಸ್‌ಎಯಡಿ ಬಂಧಿಸಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಇದೇ ಮೊದಲಬಾರಿ ಓರ್ವ ರಾಜಕಾರಣಿಯನ್ನು ಪಿಎಸ್‌ಎಯಡಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News