ಡಬ್ಲುಟಿಎ ರಾ್ಯಂಕಿಂಗ್: ನಂ.1 ಸ್ಥಾನದತ್ತ ಕರೊಲಿನಾ ಪ್ಲಿಸ್ಕೋವಾ

Update: 2019-09-16 17:54 GMT

ಪ್ಯಾರಿಸ್, ಸೆ.16: ವಾರಾಂತ್ಯದಲ್ಲಿ ಝೆಂಗ್‌ಝೌ ಓಪನ್ ಟೆನಿಸ್ ಟೂರ್ನಿಯನ್ನು ಜಯಿಸಿರುವ ಕರೊಲಿನಾ ಪ್ಲಿಸ್ಕೋವಾ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆಯುವತ್ತ ಹೆಜ್ಜೆ ಇಟ್ಟಿದ್ದಾರೆ. ನಂ.1 ಸ್ಥಾನದಲ್ಲಿರುವ ಅಶ್ಲೆ ಬಾರ್ಟಿಗಿಂತ ಕೇವಲ 86 ಅಂಕಗಳಿಂದ ಹಿಂದಿದ್ದಾರೆ.

ರವಿವಾರ ಝೆಂಗ್‌ಝೌನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪೆಟ್ರಾ ಮಾರ್ಟಿಕ್‌ರನ್ನು 6-3, 6-2 ನೇರ ಸೆಟ್‌ಗಳಿಂದ ಮಣಿಸಿದ ಝೆಕ್ ಆಟಗಾರ್ತಿ ಪ್ಲಿಸ್ಕೋವಾ ಈ ವರ್ಷ ನಾಲ್ಕನೇ ಪ್ರಶಸ್ತಿ ಜಯಿಸಿದರು.

ಆಸ್ಟ್ರೇಲಿಯದ ಬಾರ್ಟಿ ಅವರಿಂದ ನಂ.1 ಸ್ಥಾನ ಪಡೆಯುವುದು ನನ್ನ ಮುಂದಿರುವ ಗುರಿಯಲ್ಲ. ಉತ್ತಮವಾಗಿ ಆಡುವುದು ನನ್ನ ಗುರಿ. ಆ ನಿಟ್ಟಿನಲ್ಲಿ ನಾನು ಪ್ರಯತ್ನಪಡುತ್ತಿದ್ದೇನೆ. ಫಲಿತಾಂಶದ ಬಳಿಕ ಒತ್ತಡ ಕ್ಕೊಳಗಾಗದೆ ನಿರಾಳವಾಗಿರುವುದು ನನ್ನ ಉದ್ದೇಶ ಎಂದು 27ರ ಹರೆಯದ ಪ್ಲಿಸ್ಕೋವಾ ಹೇಳಿದ್ದಾರೆ.

ಡಬ್ಲುಟಿಎ ರ‍್ಯಾಂಕಿಂಗ್

1. ಅಶ್ಲೆ ಬಾರ್ಟಿ(ಆಸ್ಟ್ರೇಲಿಯ)

2. ಕರೊಲಿನಾ ಪ್ಲಿಸ್ಕೋವಾ(ಝೆಕ್)

3. ಎಲಿನಾ ಸ್ವಿಟೋಲಿನಾ(ಉಕ್ರೇನ್)

4. ನವೊಮಿ ಒಸಾಕಾ(ಜಪಾನ್)

5. ಬಿಯಾಂಕಾ ಆ್ಯಂಡ್ರೂಸ್ಕೂ(ಕೆನಡಾ)

6. ಸಿಮೊನಾ ಹಾಲೆಪ್(ರೋಮಾನಿಯ)

7. ಪೆಟ್ರಾ ಕ್ವಿಟೋವಾ(ಝೆಕ್)

8. ಕಿಕಿ ಬೆರ್ಟೆನ್ಸ್(ನೆದರ್ಲೆಂಡ್)

9. ಸೆರೆನಾ ವಿಲಿಯಮ್ಸ್(ಅಮೆರಿಕ)

10. ಬೆಲಿಂಡಾ ಬೆನ್ಸಿಕ್(ಸ್ವಿಸ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News