ತಂದೆಯ ವೀಡಿಯೊ ನೋಡಿ ಭಾವುಕರಾದ ರೊನಾಲ್ಡೊ

Update: 2019-09-16 18:07 GMT

ಹೊಸದಿಲ್ಲಿ, ಸೆ.16: ತನ್ನನ್ನು ಅಗಲಿ ರುವ ತಂದೆಯ ವೀಡಿಯೊವನ್ನು ಮೊದಲ ಬಾರಿ ವೀಕ್ಷಿಸಿದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

ಪಿಯೆರ್ಸ್ ಮೊರ್ಗನ್‌ರೊಂದಿಗೆ ನೀಡಿದ ಸಂದರ್ಶನದ ವೇಳೆ ರೊನಾಲ್ಡೊ ತನ್ನನ್ನು ಅಗಲಿರುವ ತಂದೆ ಜೋಸ್ ಡಿನಿಸ್ ಅವೆರೊ ಅವರಿದ್ದ ವೀಡಿಯೊವನ್ನು ನೋಡಿದರು. ಆ ವೀಡಿಯೊದಲ್ಲಿ ಜೋಸ್ ತನ್ನ ಮಗನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು.

ವೀಡಿಯೊ ನೋಡಿ ಭಾವುಕರಾದ ರೊನಾಲ್ಡೊ ‘‘ನಾನು ಈವರೆಗೆ ಈ ವೀಡಿಯೊವನ್ನು ನೋಡಿರಲಿಲ್ಲ. ಇದನ್ನು ನಂಬಲು ಸಾಧ್ಯವಿಲ್ಲ’’ ಎಂದರು.

ನಿಮಗೆ ಬೇಸರ ತಂದ ವಿಚಾರವೇನು? ಎಂದು ಮೊರ್ಗನ್ ಅವರು ರೊನಾಲ್ಡೊರನ್ನು ಪ್ರಶ್ನಿಸಿದರು,

‘‘ನಾನು ನಂ.1 ಆದಾಗ ತಂದೆ ಏನನ್ನೂ ನೋಡಲಿಲ್ಲ. ನಾನು ಪ್ರಶಸ್ತಿ ಸ್ವೀಕರಿಸುವ ಕ್ಷಣವನ್ನು ಅವರು ನೋಡಿಲ್ಲ. ನನ್ನ ತಾಯಿ, ನನ್ನ ಸಹೋದರರು, ನನ್ನ ಮಗನೂ ಕೂಡ ಪ್ರಶಸ್ತಿ ಸ್ವೀಕರಿಸಿದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ ಬೇಗನೆ ನಮ್ಮನ್ನಲಿದ ತಂದೆ ಇದೆಲ್ಲವನ್ನೂ ನೋಡಿರಲಿಲ್ಲ’’ ಎಂದರು. ರೊನಾಲ್ಡೊ ಅವರ ತಂದೆ 2005ರ ಸೆಪ್ಟಂಬರ್‌ನಲ್ಲಿ ತನ್ನ 52ನೇ ವಯಸ್ಸಿನಲ್ಲಿ ನಿಧರನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News