​ಸದಸ್ಯರಿಗೆ ಹಣ ಪಾವತಿಯಲ್ಲಿ ವಿಳಂಬಕ್ಕೆ ಕ್ರಮ: ಕ್ಯಾಂಪ್ಕೋ ಅಧ್ಯಕ್ಷರ ಭರವಸೆ

Update: 2019-09-17 11:47 GMT

ಮಂಗಳೂರು, ಸೆ.17: ಕೇಂದ್ರ ಸರಕಾರ ನಗದು ರಹಿತ ವ್ಯವಹಾರಗಳನ್ನು ಉತ್ತೇಜಿಸುವ ಸಲುವಾಗಿ ತಂದಿರುವ ಹೊಸ ನಿಯಮಗಳ ಅನುಸಾರ ಕ್ಯಾಂಪ್ಕೊ ಸಂಸ್ಥೆಯು ಬೆಳೆಗಾರರಿಗೆ ಅಡಿಕೆ ಖರೀದಿ ಮೇಲಿನ ಬಿಲ್ ಪಾವತಿಯನ್ನು ಬ್ಯಾಂಕಿಂಗ್ ವ್ಯವಸ್ಥೆಯ ಚೆಕ್/ನೆಫ್ಟ್ ಮೂಲಕ ಮಾಡುತ್ತಿದೆ. ಆದರೆ ಕೆಲವು ದಿನಗಳಿಂದ ಸದಸ್ಯರ ಖಾತೆಗಳಿಗೆ ಹಣದ ಜಮಾವಣೆಯಲ್ಲಿ ವ್ಯತ್ಯಯವಾಗುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳು ಇದಕ್ಕೆ ಕಾರಣವಾಗಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹರಿಸುವ ಕುರಿತು ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿರುತ್ತಾರೆ. ಕ್ಯಾಂಪ್ಕೊ ಕೂಡ ತನ್ನ ಸದಸ್ಯರಿಗೆ ಸಕಾಲಕ್ಕೆ ಹಣ ಬಿಡುಗಡೆಗೊಳಿಸಲು ಕ್ರಮ ಜರುಗಿಸುವುದಾಗಿ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News