ಎನ್.ಡಬ್ಲ್ಯೂ.ಎಫ್. ವತಿಯಿಂದ ಹೆಲ್ತ್ ಕ್ಲಬ್ ಉದ್ಘಾಟನಾ ಸಮಾರಂಭ

Update: 2019-09-17 12:33 GMT

ಮಂಗಳೂರು: ನ್ಯಾಷನಲ್ ವುಮೆನ್ಸ್ ಫ್ರಂಟ್ ಮಂಗಳೂರು ಗ್ರಾಮಾಂತರ ಜಿಲ್ಲೆಯ ಬಜ್ಪೆ ಡಿವಿಷನ್ ವ್ಯಾಪ್ತಿಯ ಹೆಲ್ತ್ ಕ್ಲಬ್ ಉದ್ಘಾಟನಾ ಸಮಾರಂಭ ಹಾಗೂ ಕ್ಯಾನ್ಸರ್ ರೋಗ ತಡೆಗಟ್ಟುವ ಜಾಗ್ರತಿ ಅಭಿಯಾನ ಕಾರ್ಯಕ್ರಮವು ಬಜ್ಪೆ ರೋಯಲ್ ಹೌಸ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಅದ್ಯಕ್ಷೆ ಝೀನತ್ ಬಂಟ್ವಾಳ ನೆರವೇರಿಸಿದರು. ಸ್ವಾಗತ ಭಾಷಣವನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಅದ್ಯಕ್ಷೆ ಝುಲೈಕಾ ಮಾಡಿದರು. ಮುಖ್ಯ ಅತಿಥಿಗಳಾಗಿ ಬಜ್ಪೆ ಗ್ರಾಮ ಪಂಚಾಯತ್ ಅದ್ಯಕ್ಷೆ ರೋಸಿ ಮಥಾಯಸ್, ಕ್ರೈಮ್ ಬ್ರಾಂಚ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಮಲಾ ಪ್ರೋಪ್ಸ್ ನಲ್, ಬಜ್ಪೆ ಎಸೈ ಅನಿತಾ ನಿಕ್ಕಂ, ಹೆಲ್ತ್ ಕ್ಲಬ್ ಅದ್ಯಕ್ಷೆ  ಝೀನತ್ ಜರಿ ಉಪಸ್ಥಿತರಿದ್ದರು.

ಡಾ.ರೋಹನ್ ಗಟ್ಟಿ ಕ್ಯಾನ್ಸರ್ ರೋಗ ತಡೆಗಟ್ಟುವ ಕುರಿತು ವಿಷಯ ಮಂಡಿಸಿದರು. ಶಾಕೀರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News