ಭಾರತೀಯ ವಾಯುಪಡೆಯಿಂದ ಅಸ್ತ್ರ ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2019-09-17 14:16 GMT

ಹೊಸದಿಲ್ಲಿ,ಸೆ.17: ಭಾರತೀಯ ವಾಯುಪಡೆ ಗಾಳಿಯಲ್ಲಿ ಗುರಿಯನ್ನು ಬೇಧಿಸಬಲ್ಲ ಅಸ್ತ್ರ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಮಂಗಳವಾರದಂದು ಯಶಸ್ವಿ ಪ್ರಯೋಗ ನಡೆಸಿತು.

ಗಾಳಿಯಲ್ಲಿ ಗುರಿಯನ್ನು ಬೇಧಿಸಬಲ್ಲ ಮೊದಲ ದೇಶೀಯ ಕ್ಷಿಪಣಿಯ ಸಾಮರ್ಥ್ಯವನ್ನು ನಿಖರವಾಗಿ ಅಳೆಯಲು ಸಜೀವ ಗುರಿಯನ್ನು ಹಾರಿಸಲಾಗಿತ್ತು ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಸುಖೋಯಿ 30 ಎಂಕೆಐ ಯುದ್ಧವಿಮಾನದ ಮೂಲಕ ಹಾರಿಸ್ಪಟ್ಟ ಕ್ಷಿಪಣಿ ಗುರಿಯನ್ನು ಬೇಧಿಸುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ರಾಡರ್‌ಗಳು, ಎಲೆಕ್ಟ್ರೋ-ಆಪ್ಟಿಕಲ್ ಟ್ರಾಕಿಂಗ್ ವ್ಯವಸ್ಥೆ ಮತ್ತು ಸೆನ್ಸರ್‌ಗಳನ್ನು ಬಳಸಾಗಿತ್ತು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ. ಅಸ್ತ್ರ ಒಂದು ದೇಶೀಯ ನಿರ್ಮಿತ ಕ್ಷಿಪಣಿಯಾಗಿದ್ದು 70ಕಿ.ಮೀ ದೂರ ತಲುಪುವ ಸಾಮರ್ಥ್ಯ ಹೊಂದಿದೆ ಮತ್ತು ತನ್ನ ಗುರಿಯತ್ತ ಗಂಟೆಗೆ 5,555ಕಿ.ಮೀ ವೇಗದಲ್ಲಿ ಹಾರಬಲ್ಲ ಶಕ್ತಿ ಹೊಂದಿದೆ. ಇದರಲ್ಲಿ 15 ಕಿ.ಗ್ರಾಂ ಸ್ಫೋಟಕಗಳನ್ನು ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News