ಮಲಾಲಗೆ ತಿರುಗೇಟು ನೀಡಿದ ಶೂಟರ್ ಸಿಧು

Update: 2019-09-18 04:09 GMT

ಹೊಸದಿಲ್ಲಿ, ಸೆ.17: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನ 370ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ನೋಬೆಲ್ ಶಾಂತಿ ಪುರಸ್ಕೃತೆ ಮತ್ತು ಪಾಕಿಸ್ತಾನದ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಮಾಡಿರುವ ಟ್ವೀಟ್‌ಗೆ ಹೋಗಿ ಶೂಟರ್ ಹೀನಾ ಸಿಧು ತಿರಗೇಟು ನೀಡಿದ್ದಾರೆ.

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕಾರಣಕ್ಕಾಗಿ ಅಲ್ಲಿನ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಮೂವರು ಹುಡುಗಿಯರನ್ನು ಭೇಟಿಯಾದಾಗ ಅವರ ಅಭಿಪ್ರಾಯ ಹೀಗಿತ್ತು‘‘ ನನಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ 12ರಂದು ಪರೀಕ್ಷೆಗೆ ಹಾಜರಾಗಲಿಲ್ಲ. ನನ್ನ ಭವಿಷ್ಯಕ್ಕೆ ಯಾವುದೇ ಭದ್ರತೆ ಇಲ್ಲ ಎಂಬ ಭಾವನೆ ಉಂಟಾಗಿದೆ. ನಾನು ಬರಹಗಾರ್ತಿಯಾಗಿ ಸ್ವತಂತ್ರ ಬದುಕು ರೂಪಿಸಬೇಕು. ಯಶಸ್ವಿ ಕಾಶ್ಮೀರಿ ಮಹಿಳೆಯಾಗಿ ಗುರುತಿಕೊಳ್ಳಬೇಕೆನಿಸುತ್ತದೆ. ಆದರೆ ಪರಸ್ಥಿತಿ ಅಲ್ಲಿ ಚೆನ್ನಾಗಿಲ್ಲ ’’ ಎಂದು ಟ್ವೀಟ್ ಮಾಡಿದ್ದರು.

   ಇದಕ್ಕೆ ಖಾರವಾಗಿ ಟ್ವೀಟ್ ಮಾಡಿರುವ ಭಾರತದ ಮಹಿಳಾ ಶೂಟರ್ ಹೀನಾ ಸಿಧು‘‘ ಸರಿ ನಿಮ್ಮ ಉದ್ದೇಶ ನಾವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕು ಎಂದಾಗಿದೆ. ಇದಕ್ಕೆ ನೀವು ಪಡೆದ ಶಿಕ್ಷಣ ಕಾರಣವಾಗಿದೆ. ನೀವು ಅಲ್ಲಿ ಸಾವಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದೀರಿ. ಪಾಕಿಸ್ತಾನ ಬಿಟ್ಟು ಓಡಿ ಹೋಗಿದ್ದೀರಿ. ಬಳಿಕ ನೀವು ಒಂದು ದಿನವೂ ಅಲ್ಲಿಗೆ ಮರಳುವ ಪ್ರಯತ್ನ ಮಾಡಲಿಲ್ಲ. ನೀವು ಯಾಕೆ ವಾಪಸಾಗಿ ನಮಗೆ ಅಲ್ಲಿ ಕಾಣಿಸಿಕೊಳ್ಳಬಾರದು ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News