ಗುಂಪು ಥಳಿತ, ಸೆಲ್ಫೀ ಸಾವುಗಳು 'ಮಾನವ ನಿರ್ಮಿತ ವಿಪತ್ತು' ಎಂದು ಗುರುತಿಸಿದ ಗುಜರಾತ್ ವಿಪತ್ತು ನಿರ್ವಹಣಾ ಪ್ರಾಧಿಕಾರ

Update: 2019-09-18 09:28 GMT

ಹೊಸದಿಲ್ಲಿ: ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಹೊಸ ಶಾಲಾ ಸುರಕ್ಷತಾ ಕಾರ್ಯಕ್ರಮದಲ್ಲಿ ಗುಂಪು ಥಳಿತ ಪ್ರಕರಣಗಳು ಹಾಗೂ ಸೆಲ್ಫೀ ಸಂಬಂಧಿತ ಸಾವುಗಳನ್ನು ಕೂಡ ಸೇರಿಸಿದೆಯಲ್ಲದೆ ಅವುಗಳನ್ನು 'ಮಾನವ ನಿರ್ಮಿತ ವಿಪತ್ತು' ಎಂದು ಬಣ್ಣಿಸಿದೆ. ಸುಮಾರು 55,000 ಶಾಲೆಗಳಲ್ಲಿ ಜಾರಿಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಎಲ್ಲಿ ಸೆಲ್ಫೀ ಕ್ಲಿಕ್ಕಿಸುವುದು ಸುರಕ್ಷಿತ ಎಂಬ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿದೆ. ಗುಂಪು ಥಳಿತ ಘಟನೆಗಳಿಗೆ ಕಾರಣವೆಂದು ತಿಳಿಯಲಾಗಿರುವ ದೃಢೀಕೃತವಲ್ಲದ ವಾಟ್ಸ್ಯಾಪ್ ಸಂದೇಶಗಳನ್ನು ಫಾವರ್ಡ್ ಮಾಡದೇ ಇರುವಂತೆಯೂ ಅದು ವಿದ್ಯಾರ್ಥಿಗಳಿಗೆ ಸಲಹೆ ನೀಡಲಿದೆ.

ಈ ಶಾಲಾ ಸುರಕ್ಷತಾ ಕಾರ್ಯಕ್ರಮದಲ್ಲಿ ಮೊದಲ ಮಾರಿಗೆ ಮಾನವ ನಿರ್ಮಿತ ವಿಪತ್ತುಗಳನ್ನು ಸೇರಿಸಲಾಗಿದೆ. ಈ ಹಿಂದೆ ಪ್ರವಾಹ, ಬೆಂಕಿ ಅವಘಡ, ಚಂಡಮಾರುತ ಇತ್ಯಾದಿಗಳನ್ನು ಮಾತ್ರ ವಿಪತ್ತುಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ದೇಶಾದ್ಯಂತ ಹಲವು ಗುಂಪು ಥಳಿತ ಘಟನೆಗಳು ಹಾಗೂ ಸೆಲ್ಫೀ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್‍ನ ಈ ಶಾಲಾ ಜಾಗೃತಿ ಕಾರ್ಯಕ್ರಮ ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News