20-21: ಏರೋಫಿಲಿಯಾ 2019 - ಇಸ್ರೋ ಹ್ಯಾಕಥಾನ್ ಮತ್ತು ಏರ್ ಶೋ

Update: 2019-09-18 11:14 GMT

ಮಂಗಳೂರು, ಸೆ.18: ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಟೀಮ್ ಚಾಲೆಂಜರ್ಸ್ ವತಿಯಿಂದ ಸೆ. 20 ಮತ್ತು 21ರಂದು ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಏರೋಫಿಲಿಯಾ 2019 -ಇಸ್ರೋ ಹ್ಯಾಕಥಾನ್ ಮತ್ತು ಏರ್ ಶೋ ಆಯೋಜಿಸಲಾಗಿದೆ.

ಸೆ. 20ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಂಡು ಏರ್ ಶೋ ಆರಂಭಗೊಳ್ಳಲಿದೆ. ಬಳಿಕ ಏರೋಮಾಡೆಲಿಂಗ್, ಡ್ರೋನ್ ರೇಸ್, ಛಾಯಾಗ್ರಹಣ, ಟಗ್ ಆಫ್ ಬಾಟ್ಸ್‌ಘಿ, ಇಸ್ರೋ ಹ್ಯಾಕಥಾನ್, ಟ್ರೆಶರ್ ಹಂಟ್, ಸಿಎಸ್‌ಜಿಒ, ತಾಂತ್ರಿಕ ಸಂವಾದ, ವಾಟರ್ ರಾಕೆಟ್, ಗ್ಲೈಡರ್ ಕಾರ್ಯಾಗಾರ, ರೂಬಿಕ್ಸ್ ಕ್ಯೂಬ್ ನಡೆಯಲಿದೆ. ಸೆ.21ರಂದು ಪೇಪರ್ ಪ್ರಸ್ತುತಿ, ತಾಂತ್ರಿಕ ಸಂವಾದ, ಪೇಪರ್ ಪ್ಲೇನ್, ರೋಬೊ ಸುಮೋ, ಓಪನ್ ಆರ್ಸಿ, ಡೆತ್‌ರೇಸ್ ಏರ್ಪಡಿಸಲಾಗಿದೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಇವೆಂಟ್ ಕೋ ಆರ್ಡಿನೇಟರ್ ಗೌರಿ ಹಿರೇಮಠ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏರೋಫಿಲಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವವರು ರೇಡಿಯೊ ನಿಯಂತ್ರಿತ ವಿಮಾನವನ್ನು ಅದರ ಆಯಾಮ ಮತ್ತು ವಿದ್ಯುತ್ ವ್ಯವಸ್ಥೆಯಲ್ಲಿ ನಿಯಂತ್ರಿಸುವ ಮಿತಿಗಳೊಂದಿಗೆ ವಿನ್ಯಾಸಗೊಳಿಸುವ ನಿರೀಕ್ಷೆಯಿದೆ. ಈ ಬಾರಿ 1500 ಮಂದಿ ಯುವ ಇಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳು ಭಾವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಅತಿ ದೊಡ್ಡ ಏರ್ ಶೋ ಇದಾಗಿದೆ. ಇಸ್ರೋ ಹ್ಯಾಕಥಾನ್ ಒಂದು ಉತ್ತಮ ಇವೆಂಟ್ ಆಗಿದ್ದು, ಅದರಲ್ಲಿ ಭಾಗವಹಿಸಲು 200 ಮಂದಿ ಇಂಜಿನಿಯರ್‌ಗಳು ನೋಂದಣಿ ಮಾಡಿದ್ದಾರೆ. ಭಾಗವಹಿಸುವವರಿಗೆ ಉತ್ತಮ ಮಾರ್ಗದರ್ಶನ ಒದಗಿಸಲು ಇಸ್ರೋ ಪ್ರತಿನಿಧಿಗಳು ಸಹಕರಿಸುತ್ತಾರೆ ಜತೆಗೆ ತಾಂತ್ರಿಕ ಸಂವಾದ ನಡೆಸಲಿದ್ದಾರೆ ಎಂದರು.

ಶೈನ್ ಫೌಂಡೇಶನ್ ನಿರ್ದೇಶಕ ಜಾನ್ಸನ್ ಟೆಲ್ಲಿಸ್, ಮುಖ್ಯ ಸಂಯೋಜಕ ಅಬ್ದುಲ್ ಶಮೀರ್, ಕಾರ್ಯಕ್ರಮ ಸಂಯೋಜಕಿ ಸ್ವಾತಿ ಮೂಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News