ಹನಿಯಾ ಹನೀಫ್ ಕಾಪುಗೆ ‘ವಿದ್ಯಾರ್ಥಿನಿ ಪೈಲಟ್ ಪರವಾನಿಗೆ’

Update: 2019-09-18 11:30 GMT

ಮಂಗಳೂರು, ಸೆ.18: ಕಾಪುವಿನ ಹನಿಯಾ ಹನೀಫ್ ‘ವಿದ್ಯಾರ್ಥಿನಿ ಪೈಲಟ್ ಪರವಾನಿಗೆ’ ಗಳಿಸಿದ್ದಾರೆ.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ 18ರ ಹರೆಯದ ಹನಿಯಾ ಹನೀಫ್‌ರಿಗೆ ಭಾರತ ಸರಕಾರದ ನಾಗರಿಕ ವಿಮಾನ ಯಾನ ಇಲಾಖೆಯು ಈ ಪರವಾನಿಗೆ ನೀಡಿದೆ. ಈಕೆ ಈ ಪರವಾನಿಗೆ ಪಡೆದ ಬ್ಯಾರಿ ಸಮುದಾಯದ ಪ್ರಥಮ ಯುವತಿ ಎಂದು ಪ್ರಕಟನೆ ತಿಳಿಸಿದೆ.

ಸದ್ಯ ಇವರು ಮೈಸೂರಿನ ಓರಿಯಂಟ್ ಫ್ಲೈಟ್ ಏವಿಯೇಶನ್ ಅಕಾಡಮಿಯಲ್ಲಿ ವಾಣಿಜ್ಯ ಪೈಲಟ್ ಪರವಾನಿಗೆ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಅದು ಪೂರ್ಣಗೊಳ್ಳಲಿದೆ.

ಈಕೆ ಹನೀಫ್ ಮತ್ತು ನಝೀಯಾ ದಂಪತಿಯ ಪುತ್ರಿ ಹಾಗೂ ದಿವಂಗತ ಉಸ್ಮಾನ್ ಮತ್ತು ಅಮೀನಾ ಮತ್ತು ಅಬ್ದುಲ್ ರಹಿಮಾನ್ ಬ್ಯಾರಿ ಮತ್ತು ಜೈನಾಬ್‌ರ ಮೊಮ್ಮಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News