ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 1.41 ಕೋಟಿ ನಿವ್ವಳ ಲಾಭ: ಸಂಘದ ಅಧ್ಯಕ್ಷ ಗಂಗಾಧರ ಉಳ್ಳಾಲ್

Update: 2019-09-18 12:15 GMT

ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು 2018-19ನೇ ಸಾಲಿನಲ್ಲಿ 436.13 ಕೋ.ರೂ. ವ್ಯವಹಾರ ನಡೆಸಿ 1.41 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಂಗಾಧರ ಉಳ್ಳಾಲ್ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವರ್ಷದಲ್ಲಿ 185.31 ಕೋಟಿ ಠೇವಣಿ ಸಂಗ್ರಹಿಸಿ 179.81 ಕೋಟಿ ರೂ. ಠೇವಣಿ ಪಾವತಿಸಿ ವರ್ಷಾಂತ್ಯಕ್ಕೆ  ರೂ. 92.90 ಕೋಟಿ ಠೇವಣಿ ಇರುತ್ತದೆ. ಈ ಬಾರಿ ನೀಡಲಾಗಿರುವ 96.98 ಕೋಟಿ ಸಾಲದ ಪೈಕಿ 91.58 ಕೋಟಿ ಸಾಲ ವಸೂಲಿಯಾಗಿರುತ್ತದೆ. ಸಾಲಾ ವಸೂಲಾತಿಯಲ್ಲಿ ಶೇ. 95 ರಷ್ಟು ಪ್ರಗತಿ ಸಾಧಿಸಿದೆ ಎಂದರು.

ಸಂಘದ ಪ್ರಧಾನ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ನೆಪ್ಟ್ ವ್ಯವಸ್ಥೆ ಅಳವಡಿಸಲಾಗಿದೆ.ಬೋಳಿಯಾರ್‍ನಲ್ಲಿ ನೂತನ ಶಾಖೆ ಉದ್ಘಾಟನೆ ಮಾಡಲಾಗಿದೆ ಎಂದು ಈ ಸಂದರ್ಭ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ತಲಪಾಡಿ, ನಿರ್ದೇಶಕ ಎಂ.ಎ ಮಹಮ್ಮದ್ ಬಶೀರ್, ಕೃಷ್ಣಪ್ಪ ಸಾಲಿಯಾನ್, ಉದಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಉಳ್ಳಾಲ್, ಗಣೇಶ್ ಶೆಟ್ಟಿ ತಲಪಾಡಿ, ಕೆ.ಬಿ. ಅಬುಸಾಲಿ, ಪದ್ಮಾವತಿ ಎಸ್ ಶೆಟ್ಟಿ, ಪ್ರಿಯಾ ಆರ್ ಉಚ್ಚಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)ಹರ್ಷವರ್ಧನ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News