ರಾಜ್ಯ ಮಟ್ಟದ ಕರಾಟೆ: ವಿದ್ಯಾಗಿರಿ ಎಸ್‍ವಿಎಸ್ ಆಂಗ್ಲ ಮಾಧ್ಯಮ ಶಾಲೆಗೆ 2 ಚಿನ್ನ- 2 ಕಂಚು

Update: 2019-09-18 12:22 GMT

ವಿಟ್ಲ, ಸೆ. 18: ಕಲ್ಲಡ್ಕ ಮೆಲ್ಕಾರ್ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಕಟಾ ವಿಭಾಗ ಹಾಗೂ ಕುಮಿಟಿ ವಿಭಾಗದಲ್ಲಿ ವಿದ್ಯಾಗಿರಿ ಎಸ್‍ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಣಮ್ಯ ಪ್ರಥಮ ಸ್ಥಾನ ಗಳಿಸಿ 2 ಚಿನ್ನದ ಪದಕವನ್ನು ಪಡೆದಿರುತ್ತಾರೆ. ಈಕೆ ಮೆಲ್ಕಾರ್ ಭಾಸ್ಕರ್-ನಿರಂಜಯ ಕುಲಾಲ್ ದಂಪತಿಯ ಪುತ್ರಿ.

ವಿದ್ಯಾಗಿರಿ ಎಸ್‍ವಿಎಸ್ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಪ್ರಥಮ್ ಅವರು ಕಟಾ ವಿಭಾಗ ಹಾಗೂ ಕುಮಿಟಿ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿ 2 ಕಂಚಿನ ಪದಕವನ್ನು ಪಡೆದಿರುತ್ತಾರೆ. ಈತ ಮೆಲ್ಕಾರ್ ಭಾಸ್ಕರ್-ನಿರಂಜಯ ಕುಲಾಲ್ ದಂಪತಿಯ ಪುತ್ರ. ಇವರಿಬ್ಬರು ಬಿ.ಸಿ.ರೋಡ್ ಶಿಹಾನ್ ವಸಂತ ಕೆ. ಬಂಗೇರ ಅವರ ಶಿಷ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News