ಮಹಾತ್ಮಾ ಗಾಂಧಿ ಮಾತ್ರ 'ರಾಷ್ಟ್ರ ಪಿತ', ಮೋದಿ ಅಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2019-09-18 17:14 GMT

ಹೊಸದಿಲ್ಲಿ, ಸೆ. 18: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ರಾಷ್ಟ್ರಪಿತ' ಎಂದು ಇತ್ತೀಚೆಗೆ ಕರೆದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ ಫಡ್ನವಿಸ್ ಅವರನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಹಾತ್ಮಾ ಗಾಂಧಿ ಅವರನ್ನು ಮಾತ್ರ 'ರಾಷ್ಟ ಪಿತ' ಎಂದು ಕರೆಯಲು ಸಾಧ್ಯ ಎಂದಿದ್ದಾರೆ.

''ಮಹಾತ್ಮಾ ಗಾಂಧಿ ಮಾತ್ರ ರಾಷ್ಟ್ರಪಿತ. ಕೇವಲ ಪ್ರಚಾರಕ್ಕಾಗಿ ಅಮೃತಾ ಫಡ್ನವಿಸ್ ಅವರು ಈ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಪರಿಗಣಿಸಲು ಬಯಸಿದರೆ, ಹಾಗೇ ಮಾಡಲಿ'' ಎಂದು ಖರ್ಗೆ ಹೇಳಿದ್ದಾರೆ. ಅಮೃತಾ ಫಡ್ನವಿಸ್ ಮಂಗಳವಾರ ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಈ ಸಂದರ್ಭ ಅವರನ್ನು 'ರಾಷ್ಟ್ರಪಿತ' ಎಂದು ಕರೆದಿದ್ದರು. ''ಸಮಾಜದ ಉತ್ತಮಿಕೆಗೆ ದಣಿವರಿಯದ ದುಡಿಯಲು ನಮಗೆ ಪ್ರೇರಣೆ ನೀಡುತ್ತಿರುವ ನಮ್ಮ ರಾಷ್ಟ್ರಪಿತ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ಅಮೃತಾ ಫಡ್ನವಿಸ್ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News