ಬಿಹಾರ ಭಾರೀ ಮಳೆಯ ಸಂದರ್ಭ ಮಿಂಚು-ಸಿಡಿಲಿಗೆ 18 ಜನರ ಬಲಿ

Update: 2019-09-18 15:27 GMT

ಪಾಟ್ನಾ,ಸೆ.18: ಬಿಹಾರದಲ್ಲಿ ಮಂಗಳವಾರದಿಂದ ಭಾರೀ ಮಳೆಯ ಸಂದರ್ಭ ಮಿಂಚು-ಸಿಡಿಲಿನ ಆರ್ಭಟಕ್ಕೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.

 ಗಯಾ ಮತ್ತು ಕೈಮುರ ಜಿಲ್ಲೆಗಳಲ್ಲಿ ತಲಾ ಮೂವರು,ಪಾಟ್ನಾ,ಭೋಜಪುರ,ಪೂರ್ವ ಚಂಪಾರಣ್,ಸಿವಾನ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಹಾಗೂ ಕಟಿಹಾರ್ ಮತ್ತು ಜೆಹಾನಾಬಾದ್ ಜಿಲ್ಲೆಗಳಲ್ಲಿ ತಲಾ ಓರ್ವರು ಬಲಿಯಾಗಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಆರಂಭಗೊಂಡ ಭಾರೀ ಮಳೆ ಬುಧವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು ಎಂದು ಬಿಹಾರ ವಿಪತ್ತು ನಿರ್ವಹಣೆ ಇಲಾಖೆಯು ಬುಧವಾರ ತಿಳಿಸಿದೆ. ಈ ವರ್ಷ ಬಿಹಾರದಲ್ಲಿ ಮಳೆಯ ಕೊರತೆಯಾಗಿದ್ದು,ಬರಸದೃಶ ಸ್ಥಿತಿಯ ಹಿನ್ನೆಲೆಯಲ್ಲಿ ವಿಶೇಷ ನೆರವು ನೀಡಲು ರಾಜ್ಯ ಸರಕಾರವು ಕಳೆದ ವಾರ 18 ಜಿಲ್ಲೆಗಳ 108 ಬ್ಲಾಕ್‌ಗಳನ್ನು ಗುರುತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News