ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಬೋನಸ್‌ಗೆ ಸಂಪುಟದ ಒಪ್ಪಿಗೆ

Update: 2019-09-18 15:39 GMT

ಹೊಸದಿಲ್ಲಿ,ಸ.18: ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಬೋನಸ್ ಆಗಿ 78 ದಿನಗಳ ವೇತನವನ್ನು ನೀಡುವ ಪ್ರಸ್ತಾವಕ್ಕೆ ಸಂಪುಟವು ಬುಧವಾರ ಒಪ್ಪಿಗೆಯನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಇಲ್ಲಿ ತಿಳಿಸಿದರು.

ಸತತವಾಗಿ ಆರನೇ ವರ್ಷ ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಬೋನಸ್ ನೀಡಲಾಗುತ್ತಿದೆ.

11 ಲಕ್ಷ ರೈಲ್ವೆ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದು,ಬೊಕ್ಕಸಕ್ಕೆ 2,000 ಕೋ.ರೂ.ವೆಚ್ಚವಾಗಲಿದೆ ಎಂದು ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News