ಮೋದಿ ವಿಮಾನಕ್ಕೆ ಪಾಕ್ ವಾಯುಪ್ರದೇಶ ಬಳಸಲು ಅನುಮತಿ ಇಲ್ಲ

Update: 2019-09-18 16:03 GMT

ಇಸ್ಲಾಮಾಬಾದ್, ಸೆ. 18: ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರಯಾಣಿಸುವಾಗ ಪಾಕಿಸ್ತಾನದ ವಾಯುಕ್ಷೇತ್ರವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂದು ಆ ದೇಶದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

ಒಂದು ವಾರದ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಸೆಪ್ಟಂಬರ್ 21ರಂದು ಅಮೆರಿಕಕ್ಕೆ ಹೊರಡಲಿದ್ದಾರೆ.

ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವೊಂದರ ಮೇಲೆ ಭಾರತೀಯ ವಾಯುಪಡೆಗಳು ದಾಳಿ ನಡೆಸಿದ ಬಳಿಕ, ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಬಾರತಕ್ಕೆ ಮುಚ್ಚಿತ್ತು. ಆದರೆ, ಜುಲೈಯಲ್ಲಿ ಅದು ತನ್ನ ವಾಯುಪ್ರದೇಶವನ್ನು ಭಾರತಕ್ಕೆ ಮತ್ತೆ ತೆರೆದಿತ್ತು.

ಆಗಸ್ಟ್ 28ರಿಂದ ಆಗಸ್ಟ್ 31ರವರೆಗೆ ಕರಾಚಿ ವಾಯುಪ್ರದೇಶದ ಮೂರು ವಾಯುಯಾನ ಮಾರ್ಗಗಳನ್ನು ಪಾಕಿಸ್ತಾನ ಮುಚ್ಚಿತ್ತು. ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪಾಕಿಸ್ತಾನ ಈಗಾಗಲೇ ಹೇಳಿದೆ.

ಈ ತಿಂಗಳ ಆದಿ ಭಾಗದಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್‌ರ ವಿಮಾನಕ್ಕೂ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಹಾರಲು ಅವಕಾಶ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News