ಗುರುದ್ವಾರದಲ್ಲಿ ದಾಂಧಲೆ: ಅರೋಪಿಗೆ 16 ತಿಂಗಳು ಜೈಲು

Update: 2019-09-18 16:09 GMT

ವಾಶಿಂಗ್ಟನ್, ಸೆ. 18: 2017ರಲ್ಲಿ ಅಮೆರಿಕದ ಗುರುದ್ವಾರವೊಂದರಲ್ಲಿ ದಾಂಧಲೆಗೈದಿರುವುದಕ್ಕಾಗಿ 29 ವರ್ಷದ ವ್ಯಕ್ತಿಯೊಬ್ಬನಿಗೆ 16 ತಿಂಗಳ ಜೈಲುವಾಸ ವಿಧಿಸಲಾಗಿದೆ ಎಂದು ‘ಲಾಸ್ ಏಂಜಲಿಸ್ ಟೈಮ್ಸ್’ ವರದಿ ಮಾಡಿದೆ.

ಅಪರಾಧಿ ಅರ್ಟ್‌ಯೊಮ್ ಮನುಕ್ಯಾನ್, ಇದಕ್ಕೂ ಮೊದಲು ಬೆಂಕಿ ಕೊಟ್ಟ ಪ್ರಕರವೊಂದರಲ್ಲಿ ಆರೋಪಿಯಾಗಿದ್ದಾನೆ. ಈ ಎರಡೂ ಪ್ರಕರಣಗಳ ಶಿಕ್ಷೆಯು ಜೊತೆ ಜೊತೆಯಾಗಿ ಸಾಗುತ್ತದೆ.

ಅವನು 2017ರ ಆಗಸ್ಟ್‌ನಲ್ಲಿ ಲಾಸ್ ಫೆಲಿಝ್‌ನ ವರ್ಮಂಟ್ ಅವೆನ್ಯೂನಲ್ಲಿರುವ ಹಾಲಿವುಡ್ ಸಿಖ್ ದೇವಸ್ಥಾನವೊಂದರ ಹೊರಗೆ ಎರಡು ಸ್ಥಳಗಳಲ್ಲಿ ದ್ವೇಷಪೂರಿತ ಬರಹಗಳನ್ನು ಗೀಚಿದ್ದನು ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆ ಹೇಳಿದೆ.

ಅವನಿಗೆ ಸೋಮವಾರ ಜೈಲು ಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News