ಗುರುಪುರ ಹೋಬಳಿ ಮಟ್ಟದ ಕ್ರೀಡಾಕೂಟ

Update: 2019-09-19 12:10 GMT

ಮಂಗಳೂರು, ಸೆ.19: ದ.ಕ.ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಗುರುವಾರ ನಗರದ ಮಂಗಳಾ ಸ್ಟೇಡಿಯಂನಲ್ಲಿ ಗುರುಪುರ ಹೋಬಳಿ ಮಟ್ಟದ 2019-20ನೇ ಸಾಲಿನ ಪ್ರೌಢಶಾಲೆಗಳ ಕ್ರೀಡಾಕೂಟ ಜರುಗಿತು.

ದ.ಕ. ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹೀಂ ಧ್ವಜಾರೋಹಣಗೈದು ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಇದೊಂದು ಸದವಕಾಶ. ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಮಕ್ಕಳು ಖುಷಿ ಪಟ್ಟುಕೊಳ್ಳಬೇಕು. ಕ್ರೀಡೆಯೊಂದಿಗೆ ಎಲ್ಲ ಮಕ್ಕಳ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದರು.

ತಾಪಂ ಸದಸ್ಯ ಸಚಿನ್ ಅಡಪ ಮಾತನಾಡಿ ಈಗ ಎಲ್ಲಾ ಕ್ರೀಡೆಗಳಲ್ಲೂ ನಮ್ಮವರು ಸಾಧನೆಗೈಯುತ್ತಿದ್ದಾರೆ. ಹಾಲಿ ನಡೆಯುವ ಕಾಮನ್ವೆಲ್ತ್ ಪವರ್‌ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಮಂಗಳೂರಿನ ಮೂವರು ಪದಕ ಗಳಿಸಿರುವುದು ಹೆಮ್ಮೆಯ ವಿಚಾರ ಎಂದರು.

ವೇದಿಕೆಯಲ್ಲಿ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ಸದಸ್ಯರಾದ ಎಕೆ ಅಶ್ರಫ್, ಎಕೆ ಮುಹಮ್ಮದ್, ಶಾಲಾ ಸಂಚಾಲಕ ಎಕೆ ಇಸ್ಮಾಯಿಲ್, ದೈಹಿಕ ಶಿಕ್ಷಕ ರಕ್ಷಕರ ಸಂಘದ ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರ, ನೋಡಲ್ ಅಧಿಕಾರಿ ಡೊನಾಲ್ಡ್ ಎಸ್‌ಎಸ್ ಲೋಬೊ,ಕ್ರೀಡಾ ಇಲಾಖಾಧಿಕಾರಿ ಲಿಲ್ಲಿ ಪಾಯಸ್, ದೈಹಿಕ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

ಅಡ್ಡೂರು ಸಹರಾ ಶಾಲೆಯ ಮುಖ್ಯ ಶಿಕ್ಷಕ ಕೇಶವ ಎಚ್. ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ವಂದಿಸಿದರು. ಶಿಕ್ಷಕ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

17 ಮತ್ತು 14 ವರ್ಷದ ವಯೋಮಿತಿಯ ಬಾಲಕ-ಬಾಲಕಿಯರ ಈ ಕ್ರೀಡಾಕೂಟದಲ್ಲಿ ಗುರುಪುರ ಹೋಬಳಿಯ 24 ಶಾಲೆಗಳ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೆ ಮುನ್ನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾಜ್ಯೋತಿ ಅನಾವರಣಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News