ದಿಗ್ವಿಜಯ್‌ ಸಿಂಗ್ ‘ಹಿಂದು ವಿರೋಧಿ’ ಎಂದು ಬಿಂಬಿಸಿದ ಪೋಸ್ಟರ್ ‌ಗಳು ಪ್ರತ್ಯಕ್ಷ !

Update: 2019-09-19 15:21 GMT

ಭೋಪಾಲ,ಸೆ.19: ಕೇಸರಿ ಬಟ್ಟೆಗಳನ್ನು ಧರಿಸಿದವರು ಅತ್ಯಾಚಾರಗಳನ್ನು ನಡೆಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಮಂಗಳವಾರ ಇಲ್ಲಿ ಟೀಕಿಸಿದ್ದ ಬೆನ್ನಿಗೇ ಅವರನ್ನು ಹಿಂದು ವಿರೋಧಿ ಎಂದು ಬಿಂಬಿಸುವ ಅನಾಮಧೇಯ ಪೋಸ್ಟರ್ ‌ಗಳು ನಗರದಲ್ಲಿ ಪ್ರತ್ಯಕ್ಷವಾಗಿವೆ. ಹಿಂದು ಧಾರ್ಮಿಕ ಸ್ಥಳಗಳಿಗೆ ಅವರಿಗೆ ಪ್ರವೇಶವನ್ನು ನಿಷೇಧಿಸುವಂತೆ ಈ ಪೋಸ್ಟರ್‌ಗಳಲ್ಲಿ ಆಗ್ರಹಿಸಲಾಗಿದೆ.

ಅಪರಿಚಿತ ಸಂಘಟನೆಯೊಂದು ಬುಧವಾರ ಮಧ್ಯರಾತ್ರಿ ನಗರದಲ್ಲಿಯ ವಿವಿಧ ದೇವಸ್ಥಾನಗಳ ಹೊರಗೆ ಈ ಪೋಸ್ಟರ್‌ ಗಳನ್ನು ಅಂಟಿಸಿತ್ತು ಎನ್ನಲಾಗಿದ್ದು,ಗುರುವಾರ ಬೆಳಿಗ್ಗೆ ಕೆಲವು ಅಪರಿಚಿತ ವ್ಯಕ್ತಿಗಳು ಅವುಗಳನ್ನು ತೆಗೆದಿದ್ದಾರೆ.

 ಸಿಂಗ್ ಅವರ ಚಿತ್ರಗಳನ್ನು ಹೊಂದಿದ್ದ ಈ ಪೋಸ್ಟರ್ ‌ಗಳು ‘ ಹಿಂದು ವಿರೋಧಿ ದಿಗ್ವಿಜಯ್ ಸಿಂಗ್‌ಗೆ ದೇವಸ್ಥಾನಗಳ ಬಾಗಿಲುಗಳು ಮುಚ್ಚಲ್ಪಡಬೇಕು. ಇದು ಹಿಂದು ಸಮಾಜದ ಕೂಗಾಗಿದೆ ’ಎಂಬ ಬರಹವನ್ನು ಹೊಂದಿದ್ದವು.

ಕೇಸರಿ ಬಟ್ಟೆಗಳನ್ನು ಧರಿಸಿದ ಜನರು ದೇವಾಲಯಗಳಲ್ಲಿಯೂ ಅತ್ಯಾಚಾರಗಳನ್ನು ನಡೆಸುತ್ತಿದ್ದಾರೆ,ತನ್ಮೂಲಕ ಸನಾತನ ಧರ್ಮವನ್ನು ಕುಲಗೆಡಿಸುತ್ತಿದ್ದಾರೆ. ಇಂತಹ ಕೃತ್ಯಗಳು ಅಕ್ಷಮ್ಯ ಎಂದು ಮಂಗಳವಾರ ಭೋಪಾಲದಲ್ಲಿ ಕಾರ್ಯಕ್ರಮ ವೊಂದರಲ್ಲಿ ಹೇಳುವ ಮೂಲಕ ಸಿಂಗ್ ವಿವಾದವನ್ನು ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News