ಸರಕಾರದಿಂದ ಯಾವುದೇ ವಿತ್ತೀಯ ವಿಸ್ತರಣೆಗೆ ಹೆಚ್ಚಿನ ಅವಕಾಶ ಇಲ್ಲ: ಆರ್‌ ಬಿಐ ಗವರ್ನರ್ ಶಕ್ತಿಕಾಂತ ದಾಸ್

Update: 2019-09-19 17:20 GMT

ಹೊಸದಿಲ್ಲಿ, ಸೆ. 19: ಸರಕಾರದಿಂದ ಯಾವುದೇ ವಿತ್ತೀಯ ವಿಸ್ತರಣೆಗೆ ಹೆಚ್ಚಿನ ಅವಕಾಶ ಇಲ್ಲ ಎಂದು ಆರ್‌ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ ಹೇಳಿದ್ದಾರೆ.

ಮುಂಬೈಯಲ್ಲಿ ಬ್ಲೂಮ್ ‌ಬರ್ಗ್ ಇಂಡಿಯಾ ಇಕನಾಮಿಕ್ ಫೋರಂನಲ್ಲಿ ಅವರು ಮಾತನಾಡಿದರು.

ಜಾಗತಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದನ್ನು ಎದುರಿಸಲು ಜಗತ್ತಿನಾದ್ಯಂತ ಕೇಂದ್ರ ಬ್ಯಾಂಕ್‌ ಗಳು ತಮ್ಮ ವಿತ್ತೀಯ ನೀತಿ ಸಡಿಲಗೊಳಿಸಿವೆ. ಆದರೆ, ಇದುವರೆಗೆ ಆರ್ಥಿಕ ಹಿಂಜರಿತ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಮೆರಿಕದ ಫೆಡರಲ್ ಬ್ಯಾಂಕ್ ಇತ್ತೀಚೆಗೆ ಬಡ್ಡಿ ದರ ಕಡಿತಗೊಳಿಸಿರುವುದು ದೇಶದೊಳಗೆ ನಿಧಿ ಒಳ ಹರಿಯುವಿಕೆಗೆ ಉತ್ತೇಜನ ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಕಚ್ಚಾ ತೈಲದ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಇತ್ತೀಚೆಗಿನ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಹಣದುಬ್ಬರದ ಮೇಲೆ ಗಮನಾರ್ಹ ಪರಿಣಾಮ ಉಂಟಾಗದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News