ಫುಟ್ಬಾಲ್ ಆಡುತ್ತಿದ್ದ ವೇಳೆ ಬಿದ್ದು ಗಾಯಗೊಂಡ ಕಾಸರಗೋಡು ಶಾಸಕ

Update: 2019-09-20 04:31 GMT

ಕಾಸರಗೋಡು, ಸೆ.20: ಪುಟ್ಬಾಲ್ ಆಟವಾಡುತ್ತಿದ್ದಾಗ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಬಿದ್ದು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಗಾಯಗೊಂಡ ಎನ್.ಎ.ನೆಲ್ಲಿಕುನ್ನು ರವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓಣಂ ಆಚರಣೆ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ‘ಓಣಂ ನಿಲಾವ್' ಸೌಹಾರ್ದ ಫುಟ್ಬಾಲ್ ಸಂದರ್ಭದಲ್ಲಿ ಘಟನೆ ನಡೆದಿದೆ.

ತಳಂಗರೆಯ ಸರಕಾರಿ ಮುಸ್ಲಿಂ ಹೈಸ್ಕೂಲ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. 

ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ನೇತೃತ್ವದ ಪಯಸ್ವಿನಿ ಹಾಗೂ ಶಾಸಕರ ನೇತೃತ್ವದ  ಚಂದ್ರಗಿರಿ ತಂಡಗಳ ನಡುವೆ ಮುಖಾಮುಖಿಯಾಗಿತ್ತು.

ಆಟದ ಸಂದರ್ಭದಲ್ಲಿ ಶಾಸಕರು ಆಯತಪ್ಪಿ ಬಿದ್ದು ಈ ಘಟನೆ ನಡೆದಿದೆ.

ಶಾಸಕರ ಕಾಲಿಗೆ ಗಾಯವಾಗಿದ್ದು, ಎಲುಬಿಗೆ ಪೆಟ್ಟಾಗಿದೆ. ಎರಡು ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News