ಅಡ್ಡೂರು: ಸೆ.22ರಂದು ವಿಖಾಯ ತರಬೇತಿ ಶಿಬಿರ-02

Update: 2019-09-21 14:37 GMT

ಮಂಗಳೂರು, ಸೆ.20: ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ದ್ವಿತೀಯ ತರಬೇತಿ ಶಿಬಿರವು ಸೆ.22ರಂದು ಬೆಳಗ್ಗೆ 9ರಿಂದ ಸಂಜೆ 5:30ರವರೆಗೆ ಅಡ್ಡೂರಿನ ಅಲ್ ಮದ್ರಸತುಲ್ ಬದ್ರಿಯ ಮದ್ರಸದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಅಡ್ಡೂರು ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ  ಉದ್ಘಾಟಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಸವಣೂರು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ದುಆಗೈಯುವರು.

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ವಿಖಾಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಮೌಲನಾ ಅನೀಸ್ ಕೌಸರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ವಿಖಾಯ ಉಸ್ತುವಾರಿ ಶರೀಫ್ ಕಕ್ಕಿಂಜೆ, ವಿಖಾಯ ಕೇಂದ್ರ ಸಮಿತಿಯ ಸದಸ್ಯ ಎಸ್.ಎಂ.ಬಶೀರ್ ಮಜಲ್, ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಆರಿಫ್ ಬಡಕಬೈಲು, ವಲಯ ವಿಖಾಯ ಅಧ್ಯಕ್ಷ ಇಬ್ರಾಹೀಂ ಕುಕ್ಕಟ್ಟೆ, ಕನ್ವೀನರ್ ಶಾಕೀರ್ ಮಳಲಿ, ಮಸೀದಿಯ ಅಧ್ಯಕ್ಷ ಟಿ.ಸೈಯದ್, ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಡಿ.ಎಸ್.ರಫೀಕ್, ಅಲ್ ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ ಇದರ ಕರ್ನಾಟಕ ಕೋ ಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು, ಕ್ಲಸ್ಟರ್ ಅಧ್ಯಕ್ಷ ಬಶೀರ್ ಸಾಗರ್ ಕಟ್ಟಪುಣಿ, ಶಾಖಾ ಅಧ್ಯಕ್ಷ ಮುಸ್ತಫ ಹಾಗೂ ಕೇಂದ್ರ ಸಮಿತಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಜಿಲ್ಲಾ ಜನರಲ್ ಕನ್ವೀನರ್ ಮುಸ್ತಫ ಕಾಂದ್ರೋಡಿ ಕಟ್ಟದಪಡ್ಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News