ಸಹ್ಯಾದ್ರಿ ಕಾಲೇಜಿನಲ್ಲಿ 2 ದಿನಗಳ ‘ಸಹ್ಯಾದ್ರಿ ಏರೋಫಿಲಿಯಾ-2019’ಕ್ಕೆ ಚಾಲನೆ

Update: 2019-09-20 08:57 GMT

ಮಂಗಳೂರು, ಸೆ.20: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರಮಟ್ಟದ ಇಸ್ರೋ ಹ್ಯಾಕಥಾನ್ ‘ಸಹ್ಯಾದ್ರಿ ಏರೋಫಿಲಿಯಾ 2019’ಕ್ಕೆ ಭಾರತ ನೌಕಾದಳದ ನಿವ್ರತ್ತ ಅಧಿಕಾರಿ ಟಿ.ಆರ್.ಎ.ನಾರಾಯಣನ್ ಶುಕ್ರವಾರ ಚಾಲನೆ ನೀಡಿದರು.

ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು.

ಸಮಾರಂಭದಲ್ಲಿ ಇಸ್ರೋ ಸಂಸ್ಥೆಯ ಪ್ರತಿನಿಧಿಗಳಾದ ಮನೀಶ್ ಸಕ್ಸೇನಾ, ಅಖಿಲೇಶ್ವರ ರೆಡ್ಡಿ, ಅತಿಥಿಗಳಾಗಿ ಅಶ್ವಿನ್ ಎಲ್. ಶೆಟ್ಟಿ, ಅಭಯ್ ಪವಾರ್, ರಾಘವೇಂದ್ರ ಬಿ.ಎಸ್., ವಿಶಾಲ್ ರಾವ್, ಡಾ.ಆನಂದ ವೇಣುಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಂಟು ರಾಜ್ಯಗಳ 31 ಇಂಜಿನಿಯರಿಂಗ್ ಕಾಲೇಜುಗಳ 500 ಪ್ರತಿನಿಧಿಗಳು ಹಾಗೂ ಸ್ಥಳೀಯ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು ಸುಮಾರು 1,750 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಏರ್ ಶೋ ಪ್ರದರ್ಶನದಲ್ಲಿ ಒಂದು ಹೆಲಿಕಾಪ್ಟರ್ ಸೇರಿದಂತೆ 25 ಮಿನಿ ವಿಮಾನಗಳ ಮಾದರಿ ಹಾರಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಇಸ್ರೊ  ರಾಷ್ಟ್ರಮಟ್ಟದ ಹ್ಯಾಕಥಾನ್ ಹಮ್ಮಿಕೊಂಡಿರುವುದು ಪ್ರಥಮ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News