ಅ.2ರಂದು ಮಂಗಳೂರಿನಲ್ಲಿ ಗಾಂಧಿ 150 ಚಿಂತನಾ ಯಾತ್ರೆಗೆ ಚಾಲನೆ

Update: 2019-09-20 09:17 GMT

ಮಂಗಳೂರು, ಸೆ.20: ಗಾಂಧಿ ಜಯಂತಿ ಪ್ರಯುಕ್ತ ಸಮದರ್ಶಿ ವೇದಿಕೆ ಮಂಗಳೂರು ಮತ್ತು ಗಾಂಧಿ 150 ಜನ್ಮ ದಿನಾಚರಣೆ ಸಮಿತಿ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 2ರಂದು ಬೆಳಗ್ಗೆ 9:30ಕ್ಕೆ ನಗರದ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಾಂಧಿ 150 ಚಿಂತನಾ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಗಾಂಧಿ ಗುಡಿಯಲ್ಲಿ ವಿಶೇಷ ಅರ್ಚನೆ ನಡೆಯಲಿದೆ.

ಆ ಬಳಿಕ ಕ್ಷೇತ್ರದ ಆವರಣದಲ್ಲಿರುವ ಸರ್ವಮಂಗಳಾ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ದ.ಕ. ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಇತ್ತೀಚೆಗೆ ಕೇಂದ್ರ ಸರಕಾರದ ಧೋರಣೆ ವಿರೋಧಿಸಿ ಐಎಎಸ್‌ಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಬಾಪು ಮತ್ತು ರಾಷ್ಟ್ರೀಯತೆ’ ಹಾಗೂ ಲೇಖಕ ಡಾ. ಜಗದೀಶ್ ಕೊಪ್ಪ ಅವರು ‘ಬಾಪು ಎಂಬ ಮನುಕುಲದ ಬೆಳಕು’ ಎಂಬ ವಿಚಾರದಲ್ಲಿ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಸಮುದಾಯ, ಮಂಗಳೂರು, ಭಾರತೀಯ ಜನಕಲಾ ಸಮಿತಿ, ದ.ಕ., ದಲಿತ ಸಂಘರ್ಷ ಸಮಿತಿ, ಅಪ್ನಾ ದೇಶ್ ಸ್ವಯಂಸ್ವೇವಕರ ಬಳಗ, ಪ್ರಜ್ಞಾ ಸಲಹಾ ಕೇಂದ್ರ ಹಾಗೂ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News