‘ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡಿದ್ದೆ’: ಪೊಲೀಸರ ಮುಂದೆ ಬಾಯ್ಬಿಟ್ಟ ಬಿಜೆಪಿ ನಾಯಕ ಚಿನ್ಮಯಾನಂದ

Update: 2019-09-20 11:51 GMT

ಹೊಸದಿಲ್ಲಿ, ಸೆ.20: ಕಾನೂನು ವಿದ್ಯಾರ್ಥಿಯಿಂದ ತಾನು ಮಸಾಜ್ ಮಾಡಿಸಿಕೊಂಡಿದ್ದೆ ಎಂದು ಬಿಜೆಪಿ ನಾಯಕ ಚಿನ್ಮಯಾನಂದ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಚಿನ್ಮಯಾನಂದನನ್ನು ಎಸ್ ಐಟಿ ಬಂಧಿಸಿದ್ದು ವಿಚಾರಣೆಯ ವೇಳೆ ಆತ ‘ನಾನು ಯುವತಿಯಿಂದ ಮಸಾಜ್ ಮಾಡಿಸಿಕೊಂಡಿದ್ದೆ” ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ ಐಟಿ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಶ್ಲೀಲವಾಗಿ ಮಾತನಾಡಿರುವುದು, ಮಸಾಜ್ ಮಾಡಿಸಿರುವುದು ಸೇರಿದಂತೆ ತನ್ನ ವಿರುದ್ಧ ಬಹುತೇಕ ಆರೋಪಗಳನ್ನು ಚಿನ್ಮಯಾನಂದ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News