ಅಡ್ಡೂರಿನಲ್ಲಿ ಪಿಎಫ್‌ಐಯಿಂದ ಸಾರ್ವಜನಿಕ ಸಭೆ

Update: 2019-09-21 07:44 GMT

ಮಂಗಳೂರು, ಸೆ.21: ‘ಭಾರತದ ಪ್ರಜಾಪ್ರಭುತ್ವ ನಾಶವಾಗುತ್ತಿದೆಯೇ?’ ಎಂಬ ವಿಷಯದಲ್ಲಿ ಪಿಎಫ್‌ಐ ಅಡ್ಡೂರು ಘಟಕದ ವತಿಯಿಂದ ಸೆ.20ರಂದು ಅಡ್ಡೂರು ರೈಫಲ್ ಕಟ್ಟಡದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಪಿಎಫ್‌ಐ ಅಡ್ಡೂರು ಘಟಕದ ಅಧ್ಯಕ್ಷ ಹಕೀಂ ಪಾಂಡೇಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಪಿಎಫ್‌ಐ ಬಂಟ್ವಾಳ ಜಿಲ್ಲಾ ಸಮಿತಿಯ ಸದಸ್ಯ ನಿಸಾರ್ ವಳವೂರು ಮಾತನಾಡಿ, ಪ್ರಸಕ್ತ ಭಾರತದಲ್ಲಾಗುವ ಗುಂಪು ಹತ್ಯೆ, ಅನ್ಯಾಯ, ಅನೀತಿಯನ್ನು ಎಲ್ಲಾ ಜಾತ್ಯತೀತ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳು, ಚಿಂತಕರು, ಒಗ್ಗಟ್ಟಾಗಿ ದಿಟ್ಟ ತನದಿಂದ ಎದುರಿಸಬೇಕಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದರು.

ಸಭೆಯಲ್ಲಿ ರೈಫಲ್ ಹಮ್ಮಬ್ಬ, ಗ್ರಾಪಂ ಸದಸ್ಯ ಎ.ಕೆ.ರಿಯಾಝ್, ಎಂ.ಎಚ್.ಮಯ್ಯದ್ದಿ, ಕಾಂಜಿಲಕೋಡಿ ಬಿ.ಎಚ್.ಜೆ.ಎಂ. ಅಧ್ಯಕ್ಷ ಎಂ.ಎ.ಅಹ್ಮದ್ ಬಾವ, ಅಡ್ಡೂರು ಬಿಜೆಎಂ ಉಪಾಧ್ಯಕ್ಷ ಎ.ಎಂ.ಅಹ್ಮದ್ ಬಾವ, ಅಡ್ಡೂರು ಆಯಿಶಾ ಮಸೀದಿಯ ಅಧ್ಯಕ್ಷ ಶಾಫಿ ಕೊಯ್ಯಾರ್ ಮತ್ತಿತರರು ಭಾಗವಹಿಸಿದ್ದರು.

ಅಶ್ರಫ್ ಎನ್.ಜಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News