ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಗಮ ‘ಮಿಲನ್-2019’

Update: 2019-09-21 10:40 GMT

ಮಂಗಳೂರು, ಸೆ.21: ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿ(ಎಸ್‌ಜೆಇಸಿ)ನಲ್ಲಿ ಓಣಂ, ಮೊಸರು ಕುಡಿಕೆ ಮತ್ತು ತೆನೆಹಬ್ಬದ ಸಂಭ್ರಮಾಚರಣೆ ‘ಮಿಲನ್-2019’ ಇತ್ತೀಚೆಗೆ ನಡೆಯಿತು.

ಓಣಂ ಅಂಗವಾಗಿ ಕಾಲೇಜಿನ ಪ್ರವೇಶದ್ವಾರದಲ್ಲಿ ಕೇರಳೀಯ ವಿದ್ಯಾರ್ಥಿಗಳು ಬೃಹತ್ ‘ಪೂಕಳಂ’ ರಚಿಸಿದರು. ಹಬ್ಬದ ಮಹತ್ವವನ್ನು ರಾಜ ಮಹಾಬಲಿಯ ಸಾಂಕೇತಿಕ ಪ್ರವೇಶದ ನಂತರ ಪ್ರಸ್ತುತಪಡಿಸಲಾಯಿತು. ಬಳಿಕ ವರ್ಣರಂಜಿತ ಮೆರವಣಿಗೆಯನ್ನು ಕಾಲೇಜಿನ ಬಾಸ್ಕೆಟ್‌ಬಾಲ್ ಅಂಗಣದಲ್ಲಿ ತಿರುವಾಧಿರ ನೃತ್ಯದೊಂದಿಗೆ ಸ್ವಾಗತಿಸಲಾಯಿತು.

ತೆನೆಹಬ್ಬದ ಆಚರಣೆ ಮತ್ತು ಸಂಜೆಯ ಮೊಸರು ಕುಡಿಕೆ ಉತ್ಸವದ ಹುಲಿ ನೃತ್ಯಕ್ಕಾಗಿ ಪೂರ್ವ ಸಿದ್ಧತೆಯ ಸಾಂಪ್ರದಾಯಿಕ ಅಭ್ಯಾಸ ನಡೆಸಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಫ್ಯಾಷನ್ ಶೋ’ ಆಯೋಜಿಸಲಾಗಿತ್ತು.

ಬಳಿಕ ಮಿಲನ್-2019’ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವು ಕಾಲೇಜಿನ ಬಾಸ್ಕೆಟ್‌ಬಾಲ್ ಅಂಗಣದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಮತ್ತು ನಟ ಭೋಜರಾಜ್ ವಾಮಂಜೂರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭ ಅವರಿಬ್ಬರನ್ನು ಸನ್ಮಾನಿಸಲಾಯಿತು.

ಕಾಲೇಜಿನ ನಿರ್ದೇಶಕ ವಂ.ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಸಹಾಯಕ ನಿರ್ದೇಶಕರಾದ ವಂ. ರೋಹಿತ್ ಡಿಕೋಸ್ತ ಹಾಗೂ ವಂ.ಅಲ್ವಿನ್ ರಿಚರ್ಡ್ ಡಿಸೋಜ, ಪ್ರಾಂಶುಪಾಲ ಡಾ.ರಿಯೊ ಡಿಸೋಜ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ಈಡನ್ ಸಿಕ್ವೇರ ಮತ್ತು ಪೂರ್ಣೇಶ್ ಎಂ. ಸಾಂಸ್ಕೃತಿಕ ಸಮಿತಿಯ ಸದಸ್ಯರ ಜೊತೆಗೂಡಿ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News