ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮಿತ್‌ಗೆ ಐತಿಹಾಸಿಕ ಬೆಳ್ಳಿ

Update: 2019-09-21 15:04 GMT

ಎಕಟೆರಿನ್‌ಬರ್ಗ್, ಸೆ.21: ಏಶ್ಯನ್ ಚಾಂಪಿಯನ್ ಅಮಿತ್ ಪಾಂಘಾಲ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ ಮೊದಲ ಬಾಕ್ಸರ್ ಎನಿಸಿಕೊಂಡಿರುವ ಅಮಿತ್ ಇತಿಹಾಸ ನಿರ್ಮಿಸಿದರು.

ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅಮಿತ್ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಶಖೊಬಿದಿನ್ ರೆರೊವ್‌ಗೆ 0-5 ಅಂತರದಿಂದ ಸೋತಿದ್ದಾರೆ.

ರೊರೊವ್ ಮೊದಲ ಸುತ್ತಿನಲ್ಲಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರೆ, ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಆಗಿರುವ ಅಮಿತ್ ಹೆಚ್ಚು ರಕ್ಷಣಾತ್ಮಕ ಕೌಶಲ್ಯ ಮೆರೆದರು.

2ನೇ ಸುತ್ತಿನ ಆರಂಭದಲ್ಲಿ ಅಮಿತ್ ಎದುರಾಳಿಗೆ ಹಲವು ಪಂಚ್ ನೀಡಿದರು. 2ನೇ ರೌಂಡ್ ಅಂತ್ಯಕ್ಕೆ ರೊರೊವ್ ಅಮಿತ್‌ಗೆ ಬಲವಾದ ಪಂಚ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News