ಕುರ್ ಆನ್ ಪರಿಚಯ ಅಭಿಯಾನ 2019: ಮಂಗಳೂರಿನಲ್ಲಿ ಯುನಿವೆಫ್ ನಿಂದ ಕಾಲ್ನಡಿಗೆ ಜಾಥಾ

Update: 2019-09-21 18:44 GMT

ಮಂಗಳೂರು: ಓದಿರಿ ಸ್ರಷ್ಟಿಕರ್ತನ‌ ಸಂದೇಶವನ್ನು ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ದ.ಕ ಒಂದು ತಿಂಗಳ ಕುರ್ ಆನ್ ಪರಿಚಯ ಅಭಿಯಾನವನ್ನು ಕಳೆದ  ಆಗಷ್ಟ್ 27 ರಂದು ಪ್ರಾರಂಭಿಸಿದ್ದು, ಇದರ ಅಂಗವಾಗಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕುರ್ ಆನ್ ಸಂದೇಶ ಬಿತ್ತರಿಸುವ ಜೀಪ್ ಹಾಗು ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಕುದ್ರೋಳಿ ಏ.1 ಬಾಗ್ ನಿಂದ ಪ್ರಾರಂಭಗೊಂಡ ಜಾಥಾ, ಕಂಡತ್ ಪಳ್ಳಿ, ಬಂದರ್, ಕಸೈಗಲ್ಲಿ, ಮಿಶನ್ ಸ್ಟ್ರೀಟ್ ಆಗಿ ಟವರ್ ಕ್ಲಾಕ್ ಹಾಗು ಆರ್ ಟಿ ಒ ಮೂಲಕ ನಗರದ  ಜಿಲ್ಲಾಧಿಕಾರಿ ಕಛೇರಿ ಬಳಿ ಸಮಾಪನಗೊಂಡಿತು.

ಕುರ್ ಆನ್ ಪರಿಚಯದ ಕರಪತ್ರ ಗಳನ್ನು ಯುನಿವೆಫ್ ಸದಸ್ಯರು ಈ ಪ್ರದೇಶಗಳಲ್ಲಿ ಹಂಚಿದರು. 8 ಕಡೆಗಳಲ್ಲಿ ಕಾರ್ನರ್ ಮೀಟಿಂಗ್ ನಡೆಸಿ ಸಾರ್ವಜನಿಕರಿಗೆ ಕುರ್ ಆನ್ ನ ಸಮಗ್ರ ಮಾಹಿತಿಗಳನ್ನು ನೀಡಲಾಯಿತು.

ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕಾರ್ಯದರ್ಶಿ ಯು.ಕೆ. ಖಾಲಿದ್, ಸದಸ್ಯ ಅಬ್ದುರ್ರಹ್ಮಾನ್ ಪಿಟಿ , ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಸಿರಾಜ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಅಭಿಯಾನ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಜಾಥಾ ದ ನೇತ್ರತ್ವವನ್ನು ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News