‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಭಾರತೀಯ-ಅಮೆರಿಕ ಮೈತ್ರಿಕೂಟದ ವಿರೋಧ

Update: 2019-09-22 11:45 GMT

ಹೊಸದಿಲ್ಲಿ, ಸೆ.22: ಹ್ಯೂಸ್ಟನ್‍ನಲ್ಲಿ ನಡೆಯುವ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಭಾರತ- ಅಮೆರಿಕ ಮೈತ್ರಿಕೂಟವಾದ ಅಲಯನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಅಕೌಂಟಬಿಲಿಟಿ (ಎಜೆಎ) ವಿರೋಧಿಸಿದೆ.

"ನಾವು ಭಾರತೀಯ ಮೂಲದ ಸಮೂಹವಾಗಿದ್ದು, ಯಾವುದೇ ರಾಷ್ಟ್ರೀಯತೆ ಅಥವಾ ಪ್ರತ್ಯೇಕತೆ ಜತೆ ಸಂಬಂಧ ಹೊಂದಿಲ್ಲ. ನಮ್ಮದು ಏಕೈಕ ಕಾರ್ಯಸೂಚಿ. ಮೋದಿ ಸರ್ಕಾರದ ಹಾಗೂ ಬಿಜೆಪಿಯ ಪ್ರಜಾಸತ್ತಾತ್ಮಕವಲ್ಲದ, ಜನವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ ಕಾರ್ಯಸೂಚಿಯನ್ನು ಬಹಿರಂಗಗೊಳಿಸುವುದು" ಎಂದು ಎಜೆಎ ಪ್ರಕಟನೆ ಹೇಳಿದೆ.

ಎಲ್ಲ ಧರ್ಮಗಳ ಭಾರತೀಯ ಮೂಲದ ಅಮೆರಿಕನ್ನರನ್ನು ಒಳಗೊಂಡ ಸಮೂಹ ಇದಾಗಿದೆ. ಮಾನವ ಹಕ್ಕುಗಳಿಗಾಗಿ ಇರುವ ಹಿಂದೂಗಳು, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಆರ್ಗನೈಸೇಷನ್ ಆಫ್ ಮೈನಾರಿಟೀಸ್ ಆಫ್ ಇಂಡಿಯಾ ಇದರಲ್ಲಿ ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News