ಹರ್ಯಾಣ ವಿಧಾನಸಭಾ ಚುನಾವಣೆಗೆ ಆಪ್‌ನ 22 ಅಭ್ಯರ್ಥಿಗಳ ಹೆಸರು ಪ್ರಕಟ

Update: 2019-09-22 14:44 GMT

ಹೊಸದಿಲ್ಲಿ,ಸೆ.22: ಹರ್ಯಾಣ ವಿಧಾನಸಭಾ ಚುನಾವಣೆಗಾಗಿ ತನ್ನ 22 ಅಭ್ಯರ್ಥಿಗಳ ಹೆಸರುಗಳನ್ನು ಆಮ್ ಆದ್ಮಿ ಪಾರ್ಟಿ (ಆಪ್)ಯು ರವಿವಾರ ಪ್ರಕಟಿಸಿದೆ.

ಹಾಲಿ ವಿಧಾನಸಭೆಯ ಅವಧಿಯು ನ.2ರಂದು ಮುಕ್ತಾಯಗೊಳ್ಳಲಿದೆ. ಅ.21ರಂದು ಚುನಾವಣೆಯು ನಡೆಯಲಿದ್ದು,ಅ.24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47, ಐಎನ್‌ಎಲ್‌ಡಿ 19 ಸ್ಥಾನಗಳನ್ನು ಪಡೆದಿದ್ದರೆ ಆಡಳಿತಾರೂಢ ಕಾಂಗ್ರೆಸ್ ಕೇವಲ 15 ಕ್ಷೇತ್ರಗಳಲ್ಲಿ ಗೆದ್ದಿತ್ತು. ಎಚ್‌ಜೆಸಿ ಎರಡು,ಎಸ್‌ಎಡಿ ಮತ್ತು ಬಿಎಸ್‌ಪಿ ತಲಾ ಒಂದು ಹಾಗೂ ಪಕ್ಷೇತರರು ಐದು ಸ್ಥಾನಗಳನ್ನು ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News