ಮ್ಯಾನ್ಮಾರ್‌ನ ಹಡಗಿನಿಂದ 300 ಕೋ.ರೂ. ಮೌಲ್ಯದ ಮಾದಕ ದ್ರವ್ಯ ವಶ

Update: 2019-09-22 15:14 GMT

 ಹೊಸದಿಲ್ಲಿ,ಸೆ.22: ಮ್ಯಾನ್ಮಾರ್‌ನ ಹಡಗೊಂದರ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ,ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 300 ಕೋ.ರೂ. ಮೌಲ್ಯದ ಕೆಟಮೈನ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿರುವುದಾಗಿ ಭಾರತೀಯ ತಟರಕ್ಷಣಾ ಪಡೆಯು ತಿಳಿಸಿದೆ.

ಗುರುವಾರ ಕಾರ್ ನಿಕೋಬಾರ್ ದ್ವೀಪದಾಚೆ ಸಮುದ್ರದಲ್ಲಿ ಮ್ಯಾನ್ಮಾರ್ ಹಡಗನ್ನು ತಡೆದು ನಿಲ್ಲಿಸಿದ ತಟರಕ್ಷಣಾ ಪಡೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದಾಗ 57 ಶಂಕಾತ್ಮಕ ಗೋಣಿಚೀಲಗಳು ಅದರಲ್ಲಿ ಪತ್ತೆಯಾಗಿದ್ದವು. ಗೋಣಿಚೀಲಗಳ ಸಹಿತ ಹಡಗನ್ನು ವಶಪಡಿಸಿಕೊಂಡ ಅಧಿಕಾರಿಗಳು ಅದರಲ್ಲಿಯ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಚೀಲಗಳಲ್ಲಿದ್ದ ಶಂಕಾಸ್ಪದ ವಸ್ತು ಕೆಟಮೈನ್ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ. ತಲಾ ಒಂದು ಕೆ.ಜಿ.ಯ ಒಟ್ಟು 1,160ಪ್ಯಾಕೆಟ್‌ಗಳು ಈ ಚೀಲಗಳಲ್ಲಿದ್ದವು.

ಈ ಯಶಸ್ವಿ ಕಾರ್ಯಾಚರಣೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತಟರಕ್ಷಣಾ ಪಡೆಯನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News