‘ಜಾತ್ಯಾತೀತತೆಯಿಂದ ಸಾಂಸ್ಕೃತಿಕ ಆಚರಣೆಗಳಿಗೆ ಎದುರಾಗಿರುವ ಸವಾಲುಗಳೇನು’?

Update: 2019-09-22 17:37 GMT

ಹೊಸದಿಲ್ಲಿ, ಸೆ.22: ಸರಕಾರದ ಅತ್ಯುನ್ನತ ನೇಮಕಾತಿ ಸಂಸ್ಥೆ ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಅಥವಾ ಯುಪಿಎಸ್ಸಿ ಆಯೋಜಿಸಿದ್ದ ನೇಮಕಾತಿ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯೊಂದು ಸದ್ಯ ವಿವಾದಕ್ಕೆ ಗ್ರಾಸವಾಗಿದೆ.

ಭಾರತೀಯ ಆಡಳಿತಾತ್ಮಕ ಸೇವೆಗಳು (ಐಎಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗೆ ಪ್ರವೇಶ ಪಡೆಯಲು ಎರಡನೇ ಹಂತದ ನೇಮಕಾತಿ ಪರೀಕ್ಷೆಯಾಗಿರುವ ಯುಪಿಎಸ್ಸಿ ಮೈನ್ ಪರೀಕ್ಷೆಯಲ್ಲಿ , “ಜಾತ್ಯತೀತತೆಯ ಹೆಸರಲ್ಲಿ ನಮ್ಮ ಸಾಂಸ್ಕೃತಿಕ ಆಚರಣೆಗಳಿಗೆ ಎದುರಾಗಿರುವ ಸವಾಲುಗಳು ಯಾವುವು?” ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆ ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಜಾತ್ಯತೀತತೆಯ ತತ್ವವನ್ನು ನಿಂದಿಸಿದಕ್ಕೆ ಸಮ ಎಂದು ಟೀಕಿಸಿರುವ ಅನೇಕ ತಜ್ಞರು ಈ ಪ್ರಶ್ನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಯುಪಿಎಸ್ಸಿ ಸೆಪ್ಟಂಬರ್ 20ರಿಂದ 29ರ ವರೆಗೆ ನಾಗರಿಕ ಸೇವೆಗಳ (ಮೈನ್) ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯಲ್ಲಿ, ನಾಗರಿಕ ಸೇವೆಗಳಲ್ಲಿ ವೃತ್ತಿಜೀವನಕ್ಕೆ ಪೂರಕವಾದ ವಿಷಯಗಳಲ್ಲಿ ಅಭ್ಯರ್ಥಿಗಿರುವ ಸಾಮಾನ್ಯ ಜ್ಞಾನದ ಮೌಲ್ಯಮಾಪನ ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News