ಉಳ್ಳಾಲ ಶೂಟೌಟ್ ಪ್ರಕರಣ: ನಿರಪರಾಧಿಗಳ ಬಿಡುಗಡೆಗೆ ಎಸ್‌ಡಿಪಿಐ ಆಗ್ರಹ

Update: 2019-09-24 12:28 GMT

ಮಂಗಳೂರು, ಸೆ.24: ಉಳ್ಳಾಲದಲ್ಲಿ ವಾಟ್ಸ್‌ಆ್ಯಪ್ ಸ್ಟೇಟಸ್ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಒಂದೇ ರಾಜಕೀಯ ಪಕ್ಷದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಶೂಟೌಟ್‌ವರೆಗೆ ಮುಂದುವರಿದಿರುವುರು ಆತಂಕಕಾರಿ ವಿಚಾರವಾಗಿದ್ದು, ಈ ಪ್ರಕರಣದಲ್ಲಿ ಕೆಲವು ಅಮಾಯಕರನ್ನು ಸಿಲುಕಿಸಲಾಗಿದ್ದು ಅವರ ಬಿಡುಗಡೆಗೊಳಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯು ಆಗ್ರಹಿಸಿದೆ.

 ಪೊಲೀಸರು ಘಟನೆ ನಡೆದ ಸ್ಥಳಕ್ಕೆ ತಲುಪುವಾಗ ನೈಜ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಪೊಲೀಸರು ಘಟನಾ ಸ್ಥಳದಲ್ಲಿದ್ದ ಕೆಲವು ಅಮಾಯಕರನ್ನಾಗಿದೆ ಬಂಧಿಸಲಾಗಿದೆ.ಘಟನೆಗೆ ಸಂಬಂಧವಿಲ್ಲದ ಮನೆಯಲ್ಲಿದ್ದ ಅಮಾಯಕರ ಬಂಧನವೂ ಆಗಿರುವುದು ಖಂಡನೀಯ. ರಹ್ಮಾನ್ ಎಂಬವರು ಅಡುಗೆ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ ಬಂಧಿಸಲಾಗಿದೆ. ರಹ್ಮಾನ್‌ನನ್ನು ವಿಚಾರಿಸಲು ಪೊಲೀಸ್ ಠಾಣೆಗೆ ತೆರಳಿದ ಆತನ ಭಾವ ಆಸಿಫ್, ಶೂಟೌಟ್‌ಗೆ ಒಳಗಾಗಿ ಕಾಲಿಗೆ ಗಾಯಗೊಂಡವನನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ಚಾಲಕ ನಾಝಿಮ್ ಮತ್ತಾತನ ಜೊತೆಯಲ್ಲಿದ್ದ ಅರ್ಷದ್, ಮುಝಮ್ಮಿಲ್ನನ್ನು ಕೂಡ ಬಂಧಿಸಲಾಗಿದೆ. ಅಲ್ಲದೆ ಸಲ್ಮಾನ್, ಸದ್ದಾಂ ಎಂಬಿಬ್ಬರು ಅಮಾಯಕರನ್ನು ಕೂಡ ಬಂಧಿಸಲಾಗಿದೆ. ಇನ್ನೂ ಕೂಡ ಇದೇ ರೀತಿ ಅಮಾಯಕರನ್ನು ಪೊಲೀಸ್ ಇಲಾಖೆ ಬಂಧಿಸುವ ಪ್ರಕ್ರಿಯೆಗೆ ಕೈ ಹಾಕಿದೆ. ಹಾಗಾಗಿ ಪೊಲೀಸ್ ಆಯುಕ್ತ ಡಾ. ಹರ್ಷ ಸೂಕ್ತ ತನಿಖೆ ನಡೆಸಿ ತಕ್ಷಣ ನಿರಪರಾಧಿಗಳನ್ನು ಬಿಡುಗಡೆ ಮಾಡಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News