ಜೈಲಿನಲ್ಲಿರುವ ಚಿದಂಬರಂಗೆ ಹುಟ್ಟುಹಬ್ಬದ ಶುಭಾಶಯ ಕಳಿಸಿದ ಪ್ರಧಾನಿ ಮೋದಿ !

Update: 2019-09-24 17:15 GMT

ಹೊಸದಿಲ್ಲಿ, ಸೆ.24: ಸದ್ಯ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ತನ್ನ ಗ್ರಾಮಕ್ಕೆ ಪ್ರಧಾನಿಯವರು ಕಳುಹಿಸಿರುವ ಶುಭಾಶಯ ಸಿಕ್ಕಿದ್ದು, ಅದನ್ನು ಜೈಲಿಗೆ ತಲುಪಿಸಲಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಸೆಪ್ಟಂಬರ್ 16 ಎಂದು ದಿನಾಂಕವಿರುವ ತಮಿಳು ಭಾಷೆಯಲ್ಲಿ ಬರೆಯಲಾದ ಪತ್ರದ ಸ್ಕ್ರೀನ್ ಶಾಟನ್ನು ಚಿದಂಬರಂ ಟ್ವೀಟ್ ಮಾಡಿದ್ದು, “ನನ್ನ ಹುಟ್ಟುಹಬ್ಬಕ್ಕೆ ನಿಮ್ಮ ಶುಭಾಶಯಗಳನ್ನು ಸ್ವೀಕರಿಸಿ ಸಂತಸದಿಂದ ಆಶ್ಚರ್ಯಗೊಂಡಿದ್ದೇನೆ” ಎಂದಿದ್ದಾರೆ.

ಇದೇ ಸಂದರ್ಭ ಕಾಂಗ್ರೆಸ್ ನಾಯಕ ಪ್ರಧಾನಿಯನ್ನು ಟೀಕಿಸಿದ್ದಾರೆ.

“ನೀವು ಶುಭಹಾರೈಸಿದಂತೆ ನಾನು ಜನರಿಗೆ ಸೇವೆ ಸಲ್ಲಿಸಲು ಬಯಸಿದ್ದೇನೆ. ದುರದೃಷ್ಟವಶಾತ್, ನಿಮ್ಮ ತನಿಖಾ ಏಜೆನ್ಸಿಗಳು ನಾನದನ್ನು ಮಾಡದಂತೆ ತಡೆಯುತ್ತಿವೆ” ಎಂದು ಇದೇ ಸಂದರ್ಭ ಚಿದಂಬರಂ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News