×
Ad

ಭದ್ರತೆಯ ಭೀತಿ ಹೊರತಾಗಿಯೂ ಪಾಕಿಸ್ತಾನಕೆ್ಕ ಕ್ರಿಕೆಟ್ ಪ್ರವಾಸ ಕೈಗೊಂಡ ಶ್ರೀಲಂಕಾ

Update: 2019-09-24 23:36 IST

ಕೊಲಂಬೊ, ಸೆ.24: ಭದ್ರತೆಯ ಭೀತಿಯ ಹೊರತಾಗಿಯೂ ಆತಿಥೇಯರು ನೀಡಿದ ಭರವಸೆಯ ಮೇಲೆ ವಿಶ್ವಾಸವಿರಿಸಿ ಶ್ರೀಲಂಕಾ ಕ್ರಿಕೆಟ್ ತಂಡ ಮಂಗಳವಾರ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದೆ.

  2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ನಡೆದಿತ್ತು. ಆ ಬಳಿಕ ಹೆಚ್ಚಿನ ಎಲ್ಲ ಅಂತರ್‌ರಾಷ್ಟ್ರೀಯ ತಂಡಗಳು ಪಾಕ್‌ಗೆ ಕ್ರಿಕೆಟ್ ಸರಣಿ ಆಡಲು ತೆರಳಲಿಲ್ಲ. ಪಾಕಿಸ್ತಾನ ತನ್ನ ಎಲ್ಲ ಸ್ವದೇಶಿ ಪಂದ್ಯಗಳನ್ನು ಯುಎಇಯಲ್ಲಿ ಆಡಿತ್ತು. ಶ್ರೀಲಂಕಾದ 10 ಮಂದಿ ಹಿರಿಯ ಆಟಗಾರರು ಭದ್ರತೆಯ ಭೀತಿಯ ಕಾರಣ ನೀಡಿ ಶುಕ್ರವಾರ ಆರಂಭವಾಗಲಿರುವ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದಿದ್ದರು.

  2009ರ ಉಗ್ರರ ದಾಳಿ ನಡೆದ ಬಳಿಕ ಮೊದಲ ಬಾರಿ ಅಕ್ಟೋಬರ್ 2017ರಲ್ಲಿ ಲಾಹೋರ್‌ನಲ್ಲಿ ನಾವು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದೆವು. ಹೀಗಾಗಿ ಪಾಕಿಸ್ತಾನಕ್ಕೆ ತೆರಳಲು ನಮಗೆ ಭೀತಿಯಿಲ್ಲ ಎಂದು ಬೌದ್ಧ ಭಿಕ್ಷುಗಳಿಂದ ಆರ್ಶೀವಾದ ಪಡೆಯಲು ಕೊಲಂಬೊಕ್ಕೆ ತೆರಳುವ ಮೊದಲು ಸುದ್ದಿಗಾರರಿಗೆ ಟ್ವೆಂಟಿ-20 ತಂಡದ ನಾಯಕ ದಸುನ್ ಶನಕ ಹೇಳಿದ್ದಾರೆ, ‘‘ನನಗೆ ಪಾಕಿಸ್ತಾನಕ್ಕೆ ತೆರಳಲು ಭದ್ರತೆಯ ಭೀತಿ ಎದುರಾಗುತ್ತಿಲ್ಲ. ಪಾಕ್‌ನಲ್ಲಿ ನಮಗೆ ಉನ್ನತ ಮಟ್ಟದ ಭದ್ರತೆ ನೀಡುವ ಭರವಸೆ ಲಭಿಸಿದೆ’’ಎಂದು ಏಕದಿನ ನಾಯಕ ಲಹಿರು ತಿರಿಮನ್ನೆ ಹೇಳಿದ್ದಾರೆ. ಪಾಕ್‌ನಲ್ಲಿ ಉಗ್ರರ ದಾಳಿಯ ಭೀತಿಯಿಲ್ಲ ಎಂದು ಖಚಿತವಾದ ಬಳಿಕ ಕಳೆದ ವಾರ ಶ್ರೀಲಂಕಾದ ರಕ್ಷಣಾ ಸಚಿವಾಲಯ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪಾಕ್‌ಗೆ ತೆರಳಲು ಗ್ರೀನ್ ಸಿಗ್ನಲ್ ನೀಡಿತ್ತು.

2009ರಲ್ಲಿ ಲಂಕಾ ಕ್ರಿಕೆಟಿಗರ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಆರು ಆಟಗಾರರು ಗಾಯಗೊಂಡಿದ್ದರು. ಪಾಕ್‌ನ ಆರು ಪೊಲೀಸರು ಹಾಗೂ ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. 

ಶ್ರೀಲಂಕಾದ ಪಾಕ್ ಪ್ರವಾಸದ ವೇಳಾಪಟ್ಟಿ

► ಏಕದಿನ ಅಂತರ್‌ರಾಷ್ಟ್ರೀಯ ಸರಣಿ: ಸೆ.27, 29 ಹಾಗೂ ಅಕ್ಟೋಬರ್ 2 ರಂದು ಕರಾಚಿಯಲ್ಲಿ.

► ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿ: ಅಕ್ಟೋಬರ್ 5, 7, 9 ರಂದು ಲಾಹೋರ್‌ನಲ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News