×
Ad

ಕಾಶ್ಮೀರ ವಿವಾದ ಅಂತರ್‌ರಾಷ್ಟ್ರೀಕರಣ: ಪಾಕ್ ವಿಫಲ: ಒಪ್ಪಿಕೊಂಡ ಇಮ್ರಾನ್ ಖಾನ್

Update: 2019-09-25 22:18 IST

ನ್ಯೂಯಾರ್ಕ್, ಸೆ. 25: ಕಾಶ್ಮೀರ ವಿವಾದವನ್ನು ಅಂತರ್‌ರಾಷ್ಟ್ರೀಕರಣಗೊಳಿಸುವ ತನ್ನ ಪ್ರಯತ್ನಗಳಲ್ಲಿ ಪಾಕಿಸ್ತಾನ ವಿಫಲವಾಗಿದೆ ಎನ್ನುವುದನ್ನು ಮಂಗಳವಾರ ಒಪ್ಪಿಕೊಂಡಿರುವ ಆ ದೇಶದ ಪ್ರಧಾನಿ ಇಮ್ರಾನ್ ಖಾನ್, ಈ ವಿಷಯದಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯದ ಬಗ್ಗೆ ನಿರಾಶೆಯಾಗಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ಬಳಿಕ, ಪಾಕಿಸ್ತಾನವು ಈ ವಿಷಯವನ್ನು ವಿವಿಧ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿದರೂ ಪಾಕಿಸ್ತಾನಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಮುಖಭಂಗವಾಗಿದೆ. ಈ ವಿಷಯದಲ್ಲಿ ಹೆಚ್ಚಿನ ದೇಶಗಳು ಭಾರತವನ್ನು ಬೆಂಬಲಿಸಿವೆ.

‘‘ಅಂತರ್‌ರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಯಿಂದ ನನಗೆ ನಿರಾಶೆಯಾಗಿದೆ.. ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೇಲೆ ಇನ್ನೂ ಒತ್ತಡ ಬಿದ್ದಿಲ್ಲ’’ ಎಂದು ಇಮ್ರಾನ್ ಹೇಳಿದರು.

‘‘ಅಂತರ್‌ರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುವುದನ್ನು ನಾವು ಮುಂದುವರಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News