ಜೆಪುರಕ್ಕೆ ಜಯ, ಟೈಟಾನ್ಸ್ ಉರುಳಿಸಿದ ವಾರಿಯರ್ಸ್

Update: 2019-09-25 18:09 GMT

 ಜೈಪುರ, ಸೆ.25: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬಂಗಾಳ ವಾರಿಯರ್ಸ್ ತಂಡಗಳು ಜಯಭೇರಿ ಬಾರಿಸಿವೆ. 106ನೇ ಪಂದ್ಯದಲ್ಲಿ ಮಣಿಂದರ್ ಸಿಂಗ್(17 ಅಂಕ)ಸಾಹಸದ ನೆರವಿನಿಂದ ವಾರಿಯರ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 40-39 ಅಂತರದಿಂದ ರೋಚಕವಾಗಿ ಮಣಿಸಿತು. 19ರಲ್ಲಿ 12ನೇ ಗೆಲುವು ದಾಖಲಿಸಿ 73 ಅಂಕ ಗಳಿಸಿರುವ ವಾರಿಯರ್ಸ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಆಕ್ರಮಿಸಿಕೊಂಡಿದೆ. ತೆಲುಗು ಪರ ಸಿದ್ದಾರ್ಥ್ ದೇಸಾಯಿ 17 ಅಂಕ ಗಳಿಸಿದರು. ಒಂದು ಅಂಕದಿಂದ ಸೋತಿರುವ ತೆಲುಗು ತಂಡದ ಪ್ಲೇ-ಆಫ್ ಅವಕಾಶಕ್ಕೆ ಹಿನ್ನಡೆಯಾಗಿದೆ.

107ನೇ ಪಂದ್ಯದಲ್ಲಿ ಜೈಪುರ ತಂಡ ಪುಣೇರಿ ಪಲ್ಟನ್ ತಂಡವನ್ನು 43-34 ಅಂತರದಿಂದ ಮಣಿಸಿತು. ದೀಪಕ್ ಹೂಡ(12), ದೀಪಕ್ ಅಗರ್ವಾಲ್(11)ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಪುಣೇರಿ ಪರ ಪಂಕಜ್ ಮೊಹಿತೆ 14 ಪಾಯಿಂಟ್ಸ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News