ಬಿ.ಸಿ.ರೋಡ್: ರಕ್ತದಾನ ಶಿಬಿರ

Update: 2019-09-25 18:45 GMT

ಬಂಟ್ವಾಳ, ಸೆ. 25: ರೋಟರಿ ಕ್ಲಬ್ ಬಂಟ್ವಾಳ ಹಾಗೂ ಬಂಟ್ವಾಳ ಸರಕಾರಿ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಇತ್ತೀಚೆಗೆ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ   ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ ಮಾತನಾಡಿ, ರಕ್ತದಾನ ಶ್ರೇಷ್ಠದಾನ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸಲು ಬಂಟ್ವಾಳ ರೋಟರಿ ಕ್ಲಬ್ ಸದಾ ಸಿದ್ಧ ಎಂದು ಹೇಳಿದರು.

ಬಂಟ್ವಾಳ ಸರಕಾರಿ ಪದವಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಘಟಕ ಹಾಗೂ ರೋಟರ್ಯಾಕ್ಟ್  ಕ್ಲಬ್ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿಯ ಸಹ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ರೋಟರಿ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ನಿಯೋಜಿತ ಅಧ್ಯಕ್ಷ ನಾರಾಯಣ ಹೆಗ್ಡೆ,  ರೋಟರಾಕ್ಟ್ ಚೇರ್ಮನ್ ವಸಂತ ಪ್ರಭು, ಉಪನ್ಯಾಸಕ ಡಾ. ಸತೀಶ್ ಗಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಹೈದರಾಲಿ, ರೆಡ್ ಕ್ರಾಸ್ ಸಂಚಾಲಕಿ ಶಶಿಕಲಾ ಉಪಸ್ಥಿತರಿದ್ದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತನಿಧಿಯ ಆಂಟನಿ ಹಾಗೂ ತಂಡ ಸಹಕರಿಸಿದರು. ಉಪನ್ಯಾಸಕ ನಂದಕಿಶೋರ್ ಸ್ವಾಗತಿಸಿದರು, ಲಿಖಿತಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News